ಟಿವಿ (Television) ಖರೀದಿ ದುಬಾರಿ ಆಗುವ ನಿರೀಕ್ಷೆ ಇದೆ. ಟಿವಿಗಳ ಬೆಲೆ ಕನಿಷ್ಠ ಶೇಕಡಾ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಟಿವಿಗಳ ಉತ್ಪಾದನೆಗೆ ಪ್ರಮುಖವಾಗಿ ಬೇಕಾಗುವ open cellಗಳ ಬೆಲೆಯಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಟಿವಿಗಳ ಬೆಲೆಯನ್ನೂ ಉತ್ಪಾದಕರು ಹೆಚ್ಚಿಸಬಹುದು ಎನ್ನಲಾಗಿದೆ.
ಈ ವರ್ಷದ ಆರಂಭದಿಂದ open cellಗಳ ಬೆಲೆಯಲ್ಲಿ ನಿರಂತರ ಏರಿಕೆ ಆಗಿದೆ. ಮಾಹಿತಿಗಳ ಪ್ರಕಾರ open cellಗಳ ದರ ಶೇಕಡಾ 15ರಿಂದ ಶೇಕಡಾ 17ರಷ್ಟು ದುಬಾರಿಯಾಗಿದೆ.
ಈ ವರ್ಷದ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು open cellsಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 5ರಿಂದ ಶೇಕಡಾ 2.5ಕ್ಕೆ ಇಳಿಸಿದ್ದರು. ದೇಶದಲ್ಲೇ open cellಗಳ ಉತ್ಪಾದನೆ ನೀಡುವ ಉದ್ದೇಶದಿಂದ ಸುಂಕ ಇಳಿಸಲಾಗಿತ್ತು.
ಆದರೆ ಭಾರತ open cellಗಳ ಉತ್ಪಾದಕ ದೇಶವಲ್ಲ, ಆಮದಿನ ಮೇಲೆ ಅವಲಂಬಿತವಾಗಿರುವ ಕಾರಣ ಮತ್ತು open cellಗಳ ಅಭಾವದ ಹಿನ್ನೆಲೆಯಲ್ಲಿ ಜನವರಿಯಿಂದಲೇ ದುಬಾರಿ ಆಗುತ್ತಿದೆ.
ADVERTISEMENT
ADVERTISEMENT