ಬಿಜೆಪಿ ಜೊತೆ ಮಾತ್ರಿ ಮಾಡಿಕೊಂಡು ಕರ್ನಾಟಕದಲ್ಲಿ 2 ಸೀಟು ಗೆದ್ದ ಕುಮಾರಸ್ವಾಮಿಯವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಾಕ್ ಕೊಟ್ಟಿದ್ದಾರೆ. ಕೇಂದ್ರ ಸಚಿವರಾಗಿ ನಿನ್ನೆಯಷ್ಟೇ ಪ್ರಮಾಣವನ ಸ್ವೀಕರಿಸಿದ ಕುಮಾರಸ್ವಾಮಿಗೆ ಮೋದಿ ನಿರಾಸೆಯುಂಟು ಮಾಡಿದ್ದಾರೆ.
ತಾವು ರೈತ ಪರ ನಾಯಕ, ತಮಗೆ ರೈತರ ಬಗ್ಗೆ ಅತ್ಯಂತ ಕಾಳಜಿಯಿದ್ದು ತಮಗೆ ಕೃಷಿ ಖಾತೆ ಕೊಟ್ಟರೆ, ಅನ್ನದಾತರ ಸೇವೆ ಸಲ್ಲಿಸುತ್ತೇನೆ ಎಂದಿದ್ದ ಕುಮಾರಸ್ವಾಮಿಗೆ ಕೃಷಿ ಖಾತೆ ಕೈತಪ್ಪಿದೆ.
ಕೃಷಿ ಖಾತೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯನ್ನು ಶಿವರಾಜ್ ಸಿಂಗ್ ಚೌಹಾಣ್ ಗೆ ನೀಡಿದ್ದು ಈ ಮೂಲಕ ಕುಮಾರಸ್ವಾಮಿಗೆ ನಿರಾಸೆಯಾಗಿದೆ.
ಮೋದಿ 3.0 ಸರ್ಕಾರದ ಸಚಿವರ ವಿವರ
ಅಮಿತ್ ಶಾ- ಗೃಹ ಸಚಿವ
ನಿತಿನ್ ಗಡ್ಕರಿ- ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ
ಅಜಯ್ ಟಮ್ಟಾ, ಹರ್ಷ್ ಮಲ್ಹೋತ್ರಾ- ಹೆದ್ದಾರಿ ಮತ್ತು ರಸ್ತೆ ಸಾರಿಗೆ ಖಾತೆ ರಾಜ್ಯ ಸಚಿವರು
ರಾಜನಾಥ್ ಸಿಂಗ್- ರಕ್ಷಣಾ ಸಚಿವ
ಎಸ್.ಜೈಶಂಕರ್ – ವಿದೇಶಾಂಗ ವ್ಯವಹಾರಗಳ ಸಚಿವ
ಧರ್ಮೇಂದ್ರ ಪ್ರದಾನ್- ಶಿಕ್ಷಣ ಸಚಿವ
ಮನೋಹರ್ ಲಾಲ್ ಖಟ್ಟರ್- ಇಂಧನ ಸಚಿವ
ನಿರ್ಮಲಾ ಸೀತಾರಾಮನ್ – ಹಣಕಾಸು ಸಚಿವೆ
ಅಶ್ವಿನಿ ವೈಷ್ಣವ್ – ರೈಲ್ವೆ ಖಾತೆ ಸಚಿವ
ಜೆ.ಪಿ ನಡ್ಡಾ- ಆರೋಗ್ಯ ಸಚಿವ
ಪಿಯೂಷ್ ಗೋಯಲ್ – ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
ಶಿವರಾಜ್ ಸಿಂಗ್ ಚೌಹಾಣ್- ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ
ಶೋಭಾ ಕರಂದ್ಲಾಜೆ- ಸಣ್ಣ ಕೈಗಾರಿಕೆಗಳ ರಾಜ್ಯ ಸಚಿವೆ
ರಾಮ್ ಮೋಹನ್ ನಾಯ್ಡು- ನಾಗರಿಕ ವಿಮಾನಯಾನ ಸಚಿವ
ಚಿರಾಗ್ ಪಾಸ್ವಾನ್- ಕಾರ್ಮಿಕ ಮತ್ತು ಕ್ರೀಡಾ ಸಚಿವ