ಕೃಷಿ ಖಾತೆ ಬಯಸಿದ್ದ ಕುಮಾರಸ್ವಾಮಿಯವರಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯನ್ನು ನರೇಂದ್ರ ಮೋದಿ ಹಂಚಿಕೆ ಮಾಡಿದ್ದಾರೆ.
ಪ್ರಹ್ಲಾದ್ ಜೋಶಿಯವರಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರ , ನವೀಕರಿಸಬಹುದಾದ ಇಂಧನ ಇಲಾಖೆ ಸಿಕ್ಕಿದೆ.
ಶೋಭಾ ಕರಂದ್ಲಾಜೆಗೆ ಸಣ್ಣ ಕೈಗಾರಿಕೆಗಳ ರಾಜ್ಯ ಖಾತೆಯನ್ನು ನೀಡಲಾಗಿದೆ. ‘
ನಿರ್ಮಲಾ ಸೀತಾರಾಮನ್ ಮತ್ತೆ ಹಣಕಾಸು ಸಚಿವೆಯಾಗಿ ಮುಂದುವರಿಯಲಿದ್ದಾರೆ.
ವಿ ಸೋಮಣ್ಣ ಅವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ಸ್ಥಾನ ಸಿಕ್ಕಿದೆ. ಈ ಹಿಂದೆ ಸುರೇಶ್ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು.
ಕುಮಾರಸ್ವಾಮಿ ಅಪೇಕ್ಷೆಗಿಂತಲೂ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಖಾತೆಯ ಜವಾಬ್ದಾರಿಯನ್ನೇ ಕೊಟ್ಟಿದ್ದಾರೆ. ಈ ಬಾರಿ ಪ್ರಹ್ಲಾದ್ ಜೋಶಿ ಆಹಾರ ಸಚಿವರಾಗಿರೋದ್ರಿಂದ ಕರ್ನಾಟಕದಲ್ಲಿ ಈ ಹಿಂದೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ಹಂಚಿಕೆಯಾಗದೆ ಫಲಾನುಭವಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಜವಾಬ್ದಾರಿ ಮತ್ತು ಒತ್ತಡ ಹೆಚ್ಚಾಗಲಿದೆ.
ಇನ್ನು ಕಳೆದ ಅವಧಿಯಲ್ಲಿ ಬರ ಪರಿಹಾರ ಸೇರಿದಂತೆ ತೆರಿಗೆ ಪಾಲು ಹಂಚಿಕೆ ವಿಚಾರದಲ್ಲೂ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನೂ ಸರಿಪಡಿಸುವ ಜವಾಬ್ದಾರಿ ಮತ್ತೆ ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಬಿದ್ದಿದೆ.
ADVERTISEMENT
ADVERTISEMENT