ಬೆಳಗ್ಗೆ ಮಹಿಳಾ ದಿನಾಚರಣೆ ಶುಭಾಶಯ – ಬಳಿಕ ನಿನ್ನ ಗಂಡ ಬದುಕಿದ್ದಾನ..? ಎಂದು ನಿಂದಿಸಿದ ಬಿಜೆಪಿ ಸಂಸದ

ಬೊಟ್ಟು ಇಕ್ಕು, ಗಂಡ ಬದುಕಿದ್ದಾನೆ ತಾನೇ..ಕಾಮನ್​ಸೆನ್ಸ್​ ಇಲ್ಲ​..!

ಇದು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆಯ್ಕೆ ಆಗಿರುವ ಬಿಜೆಪಿ ಸಂಸದ ಮುನಿಸ್ವಾಮಿ ಸಾರ್ವಜನಿಕರ ಎದುರಲ್ಲೇ ಮಹಿಳಾ ವ್ಯಾಪಾರಿಯೊಬ್ಬರನ್ನು ನಿಂದಿಸಿದ ರೀತಿ.

ಹೆಸರು ಸುಜಾತಾ ಅಂತ ಇಟ್ಕೊಂಡಿದ್ದೀಯಾ..? ನಿನ್ನ ಗಂಡ ಬದುಕಿದ್ದಾನೆ ತಾನೇ.? ನಿನಗೆ ಕಾಮನ್​ಸೆನ್ಸ್​ ಇಲ್ಲ. ಯಾರೋ ಕಾಸು ಕೊಡ್ತಾರೆಂದು ಮತಾಂತರವಾಗಿ ಬಿಡ್ತೀರಾ..?

ಎಂದು ಸಾರ್ವಜನಿಕರ ಎದುರಲ್ಲೇ ಮಹಿಳೆಗೆ ಸಂಸದ ಮುನಿಸ್ವಾಮಿ ನಿಂದಿಸಿದ್ದಾರೆ.

ವಿಚಿತ್ರ ಎಂದರೆ ಇವತ್ತು ಬೆಳಗ್ಗೆಯಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಹಿಳೆಯರಿಗೆ ಶುಭಾಶಯ ಸಂದೇಶ ಪೋಸ್ಟ್​ ಮಾಡಿದ್ದರು.

ಮಾರ್ಚ್ 8. ವಿಶ್ವ ಮಹಿಳಾ ದಿ‌ನ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ” ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.

ನಾಡಿನ ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು.

ಎಂದು ಸಂಸದ ಮುನಿಸ್ವಾಮಿ ಪೋಸ್ಟ್​ ಹಾಕಿದ್ದರು.

LEAVE A REPLY

Please enter your comment!
Please enter your name here