ಗುಜರಾತ್ ಮೂಲದ ಸಂಸ್ಥೆಯ ಮೂಲಕ ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ಗೆ ನಡೆಸಲಾಗಿದ್ದ 487 ಹುದ್ದೆಗಳ ನೇಮಕಾತಿ ಪ್ರತಿಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ವಿಧಿಸಿ ಮಧ್ಯಂತರ ಆದೇಶ ನೀಡಿದೆ.
ಕಳೆದ ವರ್ಷದ ಅಕ್ಟೋಬರ್ 20ರಂದು ಕೆಎಂಎಫ್ನಲ್ಲಿ 487 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು.
ಆದರೆ ಪರೀಕ್ಷಾ ಪ್ರಕ್ರಿಯೆನ್ನು ನಡೆಸುವ ಗುತ್ತಿಗೆಯನ್ನು ಗುಜರಾತ್ ಮೂಲದ ಸಂಸ್ಥೆ ಗ್ರಾಮೀಣ ನಿರ್ವಹಣಾ ಸಂಸ್ಥೆ, ಆನಂದ್ (IRMA)ಗೆ ಕೆಎಂಎಫ್ ನೀಡಿತ್ತು.
ಡಿಸೆಂಬರ್ 18ರಂದು ಪರೀಕ್ಷೆ ನಡೆಸಿ ಜನವರಿ 23ರಂದು ಫಲಿತಾಂಶ ಪ್ರಕಟಿಸಲಾಗಿತ್ತು.
ಆದರೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ ಮೂಲದ ಇಟಾಪನಹಳ್ಳಿ ಹಾಲು ಉತ್ಪಾದಕರ ಸಂಘ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಕೆಎಂಎಫ್ ನಿಯಮಗಳ ಪ್ರಕಾರ ನೇಮಕಾತಿ ವೇಳೆ 200 ಅಂಕಗಳ ಕನ್ನಡ ಭಾಷೆ ಪರೀಕ್ಷೆ ಕಡ್ಡಾಯವಾಗಿದೆ ಮತ್ತು ಕನ್ನಡ ಭಾಷೆಯನ್ನು ತಿಳಿದಿರುವ ರಾಜ್ಯದೊಳಗಿನ ಪರೀಕ್ಷಾ ಪ್ರಾಧಿಕಾರದ ಮೂಲಕವೇ ನಡೆಸಬೇಕು. ಆದರೆ ಐಆರ್ಎಂಎಗೆ ಕನ್ನಡ ಭಾಷಾ ಜ್ಞಾನವಿಲ್ಲದೇ ಇದ್ದರೂ ಪರೀಕ್ಷಾ ಪ್ರಕ್ರಿಯೆ ನಡೆಸಲು ಗುತ್ತಿಗೆ ನೀಡಲಾಗಿದೆ.
ಅಲ್ಲದೇ ಪರೀಕ್ಷಾ ಪ್ರಕ್ರಿಯೆ ನಡೆಸಲು ಗುಜರಾತ್ನ ಈ ಸಂಸ್ಥೆಗೆ 2.5 ಕೋಟಿ ರೂಪಾಯಿ ನೀಡಲಾಗಿದೆ.
ಸುಪ್ರೀಂಕೋರ್ಟ್ ನಿಯಮಗಳ ಪ್ರಕಾರ ಸಂದರ್ಶನಕ್ಕೂ ಮೊದಲು ಪರೀಕ್ಷಾಅಂಕಗಳನ್ನು ಪ್ರಕಟಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನೂ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ADVERTISEMENT
ADVERTISEMENT