ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದ ವೃದ್ಧೆಯ ಮೇಲಿನ ಹಲ್ಲೆ ವೀಡಿಯೋ ಕುರಿತಾಗಿ ಇದೀಗ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.
ಕೇರಳಾ ರಾಜ್ಯದ ಕೊಲ್ಲಂ ಜಿಲ್ಲೆಯ 37 ವರ್ಷದ ಮಂಜುಳಾ ಥಾಮಸ್ ಎಂಬಾಕೆ ತನ್ನ ಅತ್ತೆ 80 ವರ್ಷದ ಎಲಿಯಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿದ್ದಳು. ಮನೆಯಲ್ಲಿ ಚೇರ್ ಮೇಲೆ ಆಗಷ್ಟೇ ಕುಳಿತುಕೊಂಡಿದ್ದ ತನ್ನ ವೃದ್ಧ ಅತ್ತೆಯನ್ನು ಅಲ್ಲಿಂದ ಎದ್ದುಹೋಗಲು ತಿಳಿಸುವ ಸೊಸೆ ಮಂಜುಳ, ಏಕಾಏಕಿ ಆಕೆಯನ್ನು ಚೇರ್ ಮೇಲಿನಿಂದ ಕೆಳಕ್ಕೆ ತಳ್ಳುತ್ತಾಳೆ. ವೃದ್ಧೆ ಎಲಿಯಮ್ಮ ನೋವಿನಿಂದ ಅಳುತ್ತಾ , ಮೇಲೇಳಲು ಆಗದೆ ಅಸಹಾಯಕಳಾಗಿ ಅಳುತ್ತಿರುತ್ತಾರೆ. ನಿನ್ನೆಯಿಂದ ಈ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಪರ್ಯಾಸ ಅಂದ್ರೆ, ವೃದ್ಧೆಯ ಪುತ್ರನೇ ತನ್ನ ಪತ್ನಿಯ ನಡೆಗೆ ಬೇಸತ್ತು ಈ ವಿಡಿಯೋ ಮಾಡಿದ್ದ.
https://twitter.com/i/status/1735254362501603708
ಇನ್ನು ಮಾನವೀಯತೆಯೇ ಇಲ್ಲದಂತೆ ತನ್ನ ವೃದ್ಧ ಅತ್ತೆ ಮೇಲೆ ಹಲ್ಲೆ ಮಾಡಿರುವ ಆರೋಪಿಯ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಕುರಿತಾಗಿ ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೆ ಆರೋಪಿಯನ್ನು ಬಂಧಿಸಿದ್ದಾರೆ.