ಬಿಗ್ಬಾಸ್ ಕನ್ನಡ ಸೀಸನ್ 10 ಸೆಟ್ಗೆ ಎರಡು ಬಾರಿ ಪೊಲೀಸರ ಎಂಟ್ರಿಯಾಗಿದೆ. ಮೊದಲ ಬಾರಿ ವರ್ತೂರು ಸಂತೋಷ್ ಅವರ ಹುಲಿಉಗುರ ಪ್ರಕರಣ ಕುರಿತು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಇದರ ನಂತರ ತನಿಷಾ ಕುಪ್ಪಂಡ ಅವರು ಅವಹೇಳನಕಾರಿ ಪದ ಹೇಳಿದ್ದಾರೆ ಎಂಬ ಆರೋಪದಡಿ ಪೊಲೀಸರು ಬಿಗ್ಬಾಸ್ ಮನೆಗೆ ಬಂದಿದ್ದರು. ಇದೀಗ, ಡ್ರೋನ್ ಪ್ರತಾಪ್ ಅವರಿಗೆ ಕೂಡ ಸಂಕಷ್ಟ ಎದುರಾಗಿದೆ.
ಹೌದು ದೊಡ್ಮನೆಯಲ್ಲಿ ಎಲ್ಲ ಟಾಸ್ಕ್ ನಲ್ಲಿಯು ಉತ್ತಮವಾಗಿ ಆಡುತ್ತಿರುವ ಸ್ಪರ್ಧಿ ಡೋನ್ ಪ್ರತಾಪ್ ವಿರುದ್ಧ BBMP ಅಧಿಕಾರಿ ಡಾ.ಪ್ರಯಾಗ್ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.
ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಕ್ವಾರಂಟೈನ್ ಸಂದರ್ಭ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದರು ಎಂದು ಹೇಳಿಕೊಂಡಿದ್ದರು. ಈ ವೇಳೆ ಡ್ರೋನ್ ಪ್ರತಾಪ್ ಅವರು ಮಾತನಾಡಿದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಪ್ರತಾಪ್ ಅವರು ಅಧಿಕಾರಿಗಳು ಅಲ್ಲಿ ಕೂಡ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.
ಈ ಹೇಳಿಕೆ ಇದೀಗ ವಿವಾದ ಸ್ವರೂಪ ಪಡೆದುಕೊಂಡಿದ್ದು, ವಿವಾದಿತ ಕನ್ನಡ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಪರ್ಧಿಯಾಗಿರುವ ನೀವು, ಜನರ ಅನುಕಂಪ ಗಳಿಸುವ ಹಾಗೂ ಪ್ರಚಾರ ಪಡೆಯುವ ಉದ್ದೇಶದಿಂದ ನನ್ನ ಮೇಲೆ ಅನಗತ್ಯ ಆರೋಪಗಳನ್ನು ಮಾಡಿದ್ದೀರಿ. ಕೊರೊನಾ ಕಾಲದಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ನನ್ನ ಮೇಲೆ, ಹಲ್ಲೆ ಮಾಡಿರುವ ಆರೋಪ ಮಾಡಿದ್ದೀರಿ. ಎಲ್ಲವೂ ಸತ್ಯಕ್ಕೆ ದೂರವಾಗಿರುವ ವಿಚಾರ. ವಾಸ್ತವದಲ್ಲಿ ಕ್ವಾರಂಟೈನ್ ನಿಯಮಗಳನ್ನು ನೀವು ಉಲ್ಲಂಘಿಸಿರುವ ಬಗ್ಗೆ ನಮ್ಮ ಬಳಿಕ ಸೂಕ್ತ ದಾಖಲೆಗಳು ಇವೆ. ಇಂಥದ್ದರಲ್ಲಿ ನನ್ನ ಮೇಲೇಯೇ ಆರೋಪ ಮಾಡಿರುವ ನಿಮ್ಮ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಕ್ಷಮೆ ಕೋರದ ಹೊರತು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಡಾ. ಪ್ರಯಾಗ್ ಅವರು ನೋಟಿಸ್ನಲ್ಲಿ ತಿಳಿಸಿದ್ದಾರೆ.