BREAKING: ಸಂಚಾರಿ ನಿಯಮ ದಂಡ ಪಾವತಿಯಲ್ಲಿ ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ದೊಡ್ಡ ರಿಯಾಯಿತಿ – ಈಗಲೇ ಕಟ್ಟಿ

ಸಂಚಾರಿ ನಿಯಮ ಉಲ್ಲಂಘಿಸಿರುವ ವಾಹನ ಸವಾರರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.
ಒಂದು ವೇಳೆ ನೀವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಇನ್ನೂ ದಂಡ ಕಟ್ಟದೇ ಇದ್ದ ಪಕ್ಷದಲ್ಲಿ ಇದೇ ತಿಂಗಳ 11ನೇ ತಾರೀಕಿಗೆ ಮೊದಲು ದಂಡ ಕಟ್ಟಿಬಿಡಿ..
ಹೌದು ಫೆಬ್ರವರಿ 11ರೊಳಗೆ ದಂಡ ಕಟ್ಟುವ ಇಂತಹ ವಾಹನ ಸವಾರರು ಮತ್ತು ಮಾಲೀಕರಿಗೆ ಅವರ ಕಟ್ಟಬೇಕಿರುವ ದಂಡದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಸಿಗಲಿದೆ.
ಅಂದರೆ ಫೆಬ್ರವರಿ 11ರೊಳಗೆ ಬಾಕಿ ಉಳಿಸಿಕೊಂಡಿರುವ ದಂಡ ಪಾವತಿಸಿದರೆ ಆಗ ದಂಡದ ಮೊತ್ತದ ಅರ್ಧದಷ್ಟನ್ನು ಮಾತ್ರ ಕಟ್ಟಿದರೆ ಸಾಕು.
ಇಂಥದ್ದೊಂದು ರಿಯಾಯಿತಿಯನ್ನು ಸಾರಿಗೆ ಇಲಾಖೆ ವಾಹನ ಮಾಲೀಕರು ಮತ್ತು ಸವಾರರಿಗೆ ನೀಡಿದೆ.
ಹೈಕೋರ್ಟ್​ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಅವರ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಪ್ರಸ್ತಾವನೆಗೆ ರಾಜ್ಯ ಕಾನೂನು ಇಲಾಖೆ ಮತ್ತು ಆರ್ಥಿಕ ಇಲಾಖೆ ಅನುಮತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಫೆಬ್ರವರಿ 11ರೊಳಗೆ ದಂಡ ಕಟ್ಟುವವರಿಗೆ ಸಂಚಾರಿ ನಿಯಮಗಳ ದಂಡ ಪಾವತಿಯಲ್ಲಿ ಶೇಕಡಾ 50ರಷ್ಟು ವಿನಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಈ ವಿನಾಯಿತಿ ರಾಜ್ಯಾದ್ಯಂತ ಅನ್ವಯ ಆಗಲಿದೆ.

LEAVE A REPLY

Please enter your comment!
Please enter your name here