BIG BREAKING: ಭ್ರಷ್ಟಾಚಾರದ ಎ1 ಆರೋಪಿ ಶಾಸಕ ಮಾಡಾಳ್​ಗೆ ಜಾಮೀನು – ಬಂಧನದಿಂದ ಹೈಕೋರ್ಟ್​ ರಕ್ಷಣೆ

ಭ್ರಷ್ಟಾಚಾರ ಹಗರಣದಲ್ಲಿ ಎ1 ಆರೋಪಿ ಆಗಿರುವ, ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್​​ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮೊದಲನೇ ಆರೋಪಿ ಆಗಿರುವ ಶಾಸಕರಿಗೆ ಮಧ್ಯಂತರ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸುವಂತಿಲ್ಲ.

ನಿರೀಕ್ಷಣಾ ಜಾಮೀನು ಕೋರಿ ನಿನ್ನೆಯಷ್ಟೇ ಮಾಡಾಳ್​ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ನಟರಾಜನ್​ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ಮುಂದಿನ ವಿಚಾರಣೆ ಮಾರ್ಚ್​ 17ಕ್ಕೆ ಮುಂದೂಡಿಕೆ ಆಗಿದೆ.

48 ಗಂಟೆಗಳ ಅವಧಿಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂದು ಹೈಕೋರ್ಟ್​​ ಸೂಚಿಸಿದೆ.

5 ಲಕ್ಷ ರೂಪಾಯಿ ಭದ್ರತಾ ಠೇವಣಿ ಆಧರಿಸಿ ಜಾಮೀನು ಮಂಜೂರು ಮಾಡಲಾಗಿದೆ.

ಮಾರ್ಚ್​ 2ರಂದು ಲೋಕಾಯುಕ್ತ ಪೊಲೀಸರು ಶಾಸಕರ ಪುತ್ರ ಪ್ರಶಾಂತ್ ಮಾಡಾಳ್​ನನ್ನು ರೆಡ್​ಹ್ಯಾಂಡಾಗಿ ಅರೆಸ್ಟ್​ ಮಾಡಿದ್ದರು.

ಮಾರ್ಚ್​ 3ರಂದು ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಸಕ ಆ ಬಳಿಕ ಪೊಲೀಸರ ಕೈಗೆ ಸಿಗದೇ ನಾಪತ್ತೆ ಆಗಿದ್ದರು.

LEAVE A REPLY

Please enter your comment!
Please enter your name here