ನೌಕರಿಯಲ್ಲಿದ್ದ ವಿಚ್ಛೇದಿತ ಪತ್ನಿ ಗಂಡನಿಂದ ಸಂಪೂರ್ಣ ನಿರ್ವಹಣಾ ವೆಚ್ಚ ಕೇಳುವಂತಿಲ್ಲ: ಕರ್ನಾಟಕ ಹೈಕೋರ್ಟ್

ಮೊದಲು ನೌಕರಿಯಲ್ಲಿದ್ದ ಪತ್ನಿ ವಿಚ್ಛೇಧನದ ಬಳಿಕ ಸುಮ್ಮನೆ ಕೂತು ಕುಟುಂಬ ನಿರ್ವಹಣೆಯ ಸಂಪೂರ್ಣ ಮೊತ್ತವನ್ನು ವಿಚ್ಛೇದಿತ ಗಂಡನಿಂದ ಕೇಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್​ ಅವರಿದ್ದ ಹೈಕೋರ್ಟ್​ನ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚ್ಛೇದಿತ ಪತ್ನಿಗೆ ಗಂಡನಿಂದ ಸಿಗುವ ಮಾಸಿಕ ನಿರ್ವಹಣೆಯ ಮೊತ್ತವನ್ನು 10 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗೆ ಇಳಿಸಿದ್ದ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಪರಿಹಾರದ ಮೊತ್ತವನ್ನು 3 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಕಡಿತಗೊಳಿಸಿತ್ತು. 

ಈ ಆದೇಶವನ್ನು ಪ್ರಶ್ನಿಸಿ ಆ ಮಹಿಳೆ ಕರ್ನಾಟಕ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಆಕೆ ಮದುವೆಗೂ ಮೊದಲು ನೌಕರಿಯಲ್ಲಿದ್ದ ಅಂಶವನ್ನು ಪರಿಗಣಿಸಿ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್​

ಆಕೆ ಸುಮ್ಮನೆ ಕೂತು ಸಂಪೂರ್ಣ ನಿರ್ವಹಣೆಯ ವೆಚ್ಚವನ್ನು ಗಂಡನಿಂದ ಕೇಳುವಂತಿಲ್ಲ ಮತ್ತು ಆಕೆ ತನ್ನ ಜೀವನನಿರ್ವಹಣೆಗಾಗಿ ಪ್ರಯತ್ನ ಪಡಬೇಕು ಮತ್ತು ತನ್ನ ಗಂಡನಿಂದ ಕೇವಲ ಬೆಂಬಲಾತ್ಮಕವಾಗಿ ನಿರ್ವಹಣಾ ವೆಚ್ಚವನ್ನು ಕೇಳಬಹುದು 

ಎಂದು ಹೈಕೋರ್ಟ್​ ಆದೇಶದಲ್ಲಿ ತಿಳಿಸಿದೆ. 

ಕೇವಲ ಪತ್ನಿಯ ನಿರ್ವಹಣಾ ವೆಚ್ಚವನ್ನಷ್ಟೇ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಕಡಿತಗೊಳಿಸಿದ್ದು, ಮಗುವಿನದ್ದಲ್ಲ. ಅಲ್ಲದೇ ಆಕೆ ತನ್ನ ಅತ್ತೆ ಮತ್ತು ನಾದಿನಿಯ ಜೊತೆಗೆ ಇರಲು ಒಪ್ಪಿಕೊಂಡಿಲ್ಲ ಹಾಗೂ ಪ್ರಾವಿಜನ್​ ಸ್ಟೋರ್​ ನಡೆಸುತ್ತಿರುವ ಗಂಡ ತನ್ನ ತಾಯಿ ಮತ್ತು ಅವಿವಾಹಿತ ಸಹೋದರಿಯನ್ನೂ ನೋಡಿಕೊಳ್ಳಬೇಕಾಗಿದೆ

ಎಂಬ ಅಂಶವನ್ನೂ ಹೈಕೋರ್ಟ್​ ಆದೇಶದಲ್ಲಿ ಪರಿಗಣಿಸಿದೆ.

LEAVE A REPLY

Please enter your comment!
Please enter your name here