ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇಮಕೊಂಡಿದ್ದಾರೆ.
26 ಟೆಸ್ಟ್ ಪಂದ್ಯಗಳು, 191 ಏಕದಿನ ಪಂದ್ಯ ಮತ್ತು 4 ಟಿ-ಟ್ವೆಂಟಿ ಪಂದ್ಯಗಳಲ್ಲಿ ಅಗರ್ಕರ್ ಆಡಿದ್ದಾರೆ. 110 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದಾರೆ.
ಮಾಜಿ ವೇಗದ ಬೌಲರ್ ಆಗಿರುವ ಅಗರ್ಕರ್ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತ ಗೆದ್ದಿದ್ದ ಟಿ-ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಆಡಿದ್ದರು.
2000ರಲ್ಲಿ ಜಿಂಬಾಬ್ವೆ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ವಿಶ್ವದಾಖಲೆ ಇವರ ಹೆಸರಲಿದೆ. 23 ಏಕದಿನ ಪಂದ್ಯದಲ್ಲೇ ಅತೀ ವೇಗದಲ್ಲಿ 50 ವಿಕೆಟ್ ಪಡೆದ ಹೆಗ್ಗಳಿಕೆಯೂ ಇವರದ್ದು.
ಐಪಿಎಲ್ನಲ್ಲಿ ಅಗರ್ಕರ್ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿದ್ದರು.
ಪುರುಷರ ಆಟಗಾರರ ಆಯ್ಕೆ ತಂಡದಲ್ಲಿ ಶಿವಸುಂದರ್ದಾಸ್, ಸುಬ್ರತೋ ಬ್ಯಾನರ್ಜಿ, ಸಲಿಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಕೂಡಾ ಇದ್ದಾರೆ.
ADVERTISEMENT
ADVERTISEMENT