ಕರ್ನಾಟಕ ವಿಧಾನಸಭೆಯ 223 ಶಾಸಕರ ಪೈಕಿ 122 ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಂದರೆ ಒಟ್ಟು ಶಾಸಕರ ಪೈಕಿ ಶೇಕಡಾ 55 ಮಂದಿ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ.
ಕ್ರಿಮಿನಲ್ ಕೇಸ್ಗಳನ್ನು ಎದುರಿಸುತ್ತಿರುವ ಶಾಸಕರ ಪೈಕಿ 71 ಶಾಸಕರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳಿವೆ. ಅಂದರೆ ಶೇಕಡಾ 32ರಷ್ಟು ಶಾಸಕರು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
223 ಶಾಸಕರ ಪೈಕಿ ಓರ್ವ ಶಾಸಕರ ವಿರುದ್ಧ ಕೊಲೆ ಪ್ರಕರಣ, ಮೂವರ ವಿರುದ್ಧ ಕೊಲೆ ಯತ್ನ ಪ್ರಕರಣ ಮತ್ತು 7 ಮಂದಿ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣಗಳಿದ್ದು, ಒಬ್ಬರ ವಿರುದ್ಧ ಅತ್ಯಾಚಾರ ಪ್ರಕರಣವಿದೆ.
ಕರ್ನಾಟಕ 32 ಶಾಸಕರ ಬಳಿ ನೂರು ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಆಸ್ತಿ ಇದೆ. ಕರ್ನಾಟಕದ 223 ಶಾಸಕರ ಬಳಿ ಸರಾಸರಿ 64 ಕೋಟಿ ರೂಪಾಯಿ ಮೊತ್ತದ ಆಸ್ತಿ ಇದೆ.
ದೇಶದ ಅತ್ಯಂತ ಶ್ರೀಮಂತರ ಶಾಸಕರ ಪೈಕಿ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಹೆಸರೇ ಮೊದಲಿಗಿದೆ. ದೇಶದ ಅತೀ ಶ್ರೀಮಂತ 10 ಶಾಸಕರ ಪೈಕಿ ನಾಲ್ವರು ಕರ್ನಾಟಕದವರೇ.
1. ಕನಕಪುರ ಶಾಸಕ ಡಿ ಕೆ ಶಿವಕುಮಾರ್ – 1,413 ಕೋಟಿ ರೂಪಾಯಿ ಆಸ್ತಿ
2. ಗೌರಿಬಿದನೂರು ಶಾಸಕ ಕೆ ಹೆಚ್ ಪುಟ್ಟಸ್ವಾಮಿಗೌಡ – 1,267 ಕೋಟಿ ರೂಪಾಯಿ ಆಸ್ತಿ
3. ಗೋವಿಂದರಾಜನಗರ ಪ್ರಿಯಾಕೃಷ್ಣ – 1,156 ಕೋಟಿ ರೂಪಾಯಿ ಆಸ್ತಿ
6. ಹೆಬ್ಬಾಳ ಶಾಸಕ ಸಚಿವ ಬೈರತಿ ಸುರೇಶ್ – 648 ಕೋಟಿ ರೂಪಾಯಿ
ADVERTISEMENT
ADVERTISEMENT