ಕರ್ಮ ಯಾವತ್ತಿದ್ರೂ ಬಿಡಲ್ಲ – ರೋಹಿಣಿ ಸಿಂಧೂರಿಗೆ D K ರವಿ ಪತ್ನಿ ಕುಸುಮಾ ಪ್ರತಿಕ್ರಿಯೆ

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್​ ಅಧಿಕಾರಿ ಐಜಿಪಿ ರೂಪಾ ಅವರು ಸ್ಫೋಟಕ ಆರೋಪಗಳನ್ನು ಮಾಡಿದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಐಎಎಸ್​ ಅಧಿಕಾರಿ ಡಿ ಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.
ಕರ್ಮ ನಿಮ್ಮನ್ನು ಬೆನ್ನತ್ತಿ ಬರಲಿದೆ, ಇವತ್ತಲ್ಲ ನಾಳೆ, ಆದರೆ ಬಂದೇ ಬರುತ್ತೆ
ಎಂದು ಮೊನಚಾಗಿ ಪ್ರತಿಕ್ರಿಯಿಸಿದ್ದಾರೆ.
ಡಿ ಕೆ ರವಿ ಆತ್ಮಹತ್ಯೆಗೆ ರೋಹಿಣಿ ಸಿಂಧೂರಿ ಜೊತೆಗೆ ಹೊಂದಿದ್ದ ಪ್ರೇಮ ನಂಟು ವಿಫಲವಾಗಿದ್ದೇ ಕಾರಣ ಎಂದು ರೋಹಿಣಿ ಸಿಂಧೂರಿ ಮತ್ತು ಡಿಕೆ ರವಿ ನಡುವೆ ನಡೆದಿದ್ದ ಸಂಭಾಷಣೆಯ ದಾಖಲೆಗಳನ್ನು ಉಲ್ಲೇಖಿಸಿ ಸಿಬಿಐ ತನಿಖಾ ವರದಿ ಸಲ್ಲಿಸಿತ್ತು. 
ಕುಸುಮಾ ಅವರ ಟ್ವೀಟ್​​ಗೆ ಡಿ ರೂಪಾ ಅವರು ಪ್ರತಿಕ್ರಿಯಿಸಿದ್ದಾರೆ.
ಕುಸುಮಾ, ಮಹಿಳೆಯಾಗಿ ನನಗೆ ನಿಮ್ಮ ನೋವು ಅರ್ಥ ಆಗುತ್ತೆ. ಹಲವು ಇತರೆ ಮಹಿಳೆಯರ ನೋವೂ ಅರ್ಥ ಆಗುತ್ತೆ (ಅವರಲ್ಲಿ ಕೆಲವರು ಐಎಎಸ್​ಗಳೂ ಇದ್ದಾರೆ), ಆದರೂ ನಿಸ್ಸಾಹಯಕ. ಆದರೆ ಕೊನೆಗೆ ಆ ಸಂಚುಗಾರರ ವಿರುದ್ಧದ ನಿಲ್ಲಲೇಬೇಕಾಗುತ್ತದೆ ( ಅದು ಮಹಿಳೆಯಾಗಿದ್ದರೂ). ಈ ವಿಷಯದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ. ದೇವರು ಆಕೆಗೆ (ರೋಹಿಣಿ ಸಿಂಧೂರಿಗೆ) ಇಂಥದನ್ನು ಮತ್ತೆ ಮಾಡದಂತೆ ಸದ್ಭುದ್ಧಿ ಕೊಡಲಿ
ಎಂದು ಡಿ ರೂಪಾ ಅವರು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here