ವಿಶೇಷ ವರದಿ: ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು
ರೋಹಿಣಿ ಸಿಂಧೂರಿ ದಾಸರಿ. 2009ನೇ ಸಾಲಿನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ. ಐಎಎಸ್ ಪರೀಕ್ಷೆಯಲ್ಲಿ 43ನೇ ಸ್ಥಾನ ಪಡೆದವರು. ಇವರ ಕೇಡರ್ ಗುರುತಿನ ಸಂಖ್ಯೆ: 01KN108K04. ಇವರು ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವೀಧರೆ.
ಮಸ್ಸೂರಿಯಲ್ಲಿ 2009ರ ಆಗಸ್ಟ್ನಿಂದ 2011ರ ಆಗಸ್ಟ್ವರೆಗೆ ಎರಡು ವರ್ಷಗಳ ತರಬೇತಿ ಬಳಿಕ 2011ರಲ್ಲಿ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ರೋಹಿಣಿ ಸಿಂಧೂರಿ ಅವರು ನಿರ್ವಹಿಸಿದ ಮೊದಲ ಹುದ್ದೆ ತುಮಕೂರು ಸಹಾಯಕ ಆಯುಕ್ತರಾಗಿ.
2014ರಿಂದ 2015ರ ಸೆಪ್ಟೆಂಬರ್ವರೆಗೆ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಇವರು 2017ರ ಜುಲೈನಿಂದ 2019ರ ಫೆಬ್ರವರಿವರೆಗೆ ಹಾಸನ ಜಿಲ್ಲಾಧಿಕಾರಿ ಆಗಿದ್ದರು.
ಹಾಸನ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ಅವರನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ವೇಳೆ ಎತ್ತಂಗಡಿ ಮಾಡಿದ್ದು ದೊಡ್ಡ ರಾಜಕೀಯ ವಿಷಯವಾಗಿ ಬದಲಾಗಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸಿದ್ದರಾಯ್ಯನವರ ಸರ್ಕಾರದ ಮೇಲೆ ಮುಗಿಬಿದ್ದಿದ್ದವು.
ರೋಹಿಣಿ ಸಿಂಧೂರಿ ಅವರ ಬಳಿ ಎಷ್ಟು ಆಸ್ತಿ ಇದೆ..?
ಅಖಿಲ ಭಾರತ ಸೇವಾ ನಡತೆ ನಿಯಮಾವಳಿ 1968ರ ಸೆಕ್ಷನ್ 16ರ ಪ್ರಕಾರ ಸೇವೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿಯೂ ಸ್ಥಿರಾಸ್ತಿ ಮತ್ತು ಚರಾಸ್ತಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸುವುದು ಕಡ್ಡಾಯ. ತನ್ನ ಹೆಸರಲ್ಲಿರುವ ಅಥವಾ ತನ್ನ ಕುಟುಂಬದವರ ಹೆಸರಲ್ಲಿರುವ ಅಥವಾ ವಂಶಪಾರಂಪರ್ಯವಾಗಿ ಬಂದಿರುವ ಆಸ್ತಿ-ಪಾಸ್ತಿಗಳ ದಾಖಲೆ ಸಲ್ಲಿಸುವುದು ಕಡ್ಡಾಯ.
ಸರ್ಕಾರದ ಪೂರ್ವಾನುಮತಿ ಇಲ್ಲದೇ ತನ್ನ ಅಥವಾ ತನ್ನ ಕುಟುಂಬದವರ ಹೆಸರಲ್ಲಿ ಆಸ್ತಿಗಳ ಖರೀದಿ ಅಥವ ಮಾರಾಟ, ಗುತ್ತಿಗೆ ಕೊಡುವಂತಿಲ್ಲ.
50 ಸಾವಿರ ಮೇಲ್ಪಟ್ಟ ಮೌಲ್ಯದ ಉಡುಗೊರೆಗಳನ್ನು ಪಡೆದ್ದಲ್ಲಿ ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸಬೇಕು.
ರೋಹಿಣಿ ಸಿಂಧೂರಿ ಬಳಿ ಇರುವ ಆಸ್ತಿ ಎಷ್ಟು..?
2022ರ ಡಿಸೆಂಬರ್ ಅಂತ್ಯಕ್ಕೆ ಅನ್ವಯವಾಗುವಂತೆ ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ಬಳಿ ಎಷ್ಟು ಆಸ್ತಿ ಇದೆ ಎಂಬ ಬಗ್ಗೆ ಮುಜರಾಯಿ ಇಲಾಖೆ ಆಯುಕ್ತೆಯಾಗಿರುವ ರೋಹಿಣಿ ಸಿಂಧೂರಿ ಅವರು ಕಳೆದ ತಿಂಗಳ ಜನವರಿ 23ರಂದು ಮಾಹಿತಿ ಸಲ್ಲಿಸಿದ್ದರು.
1. ಕಲ್ಲೂರು ಮಂಡಲ, ಖಮ್ಮಂ ಜಿಲ್ಲೆ:
1,222 ಚದರ ಯಾರ್ಡ್ ವೀಸ್ತೀರ್ಣದ ಭೂಮಿಯನ್ನು ಹೆಚ್ಪಿಸಿಎಲ್ಗೆ ಗುತ್ತಿಗೆ ನಿಡಲಾಗಿದೆ. ಆಸ್ತಿಯ ಮಾರುಕಟ್ಟೆ ಮೌಲ್ಯ 1 ಕೋಟಿ. ಈ ಭೂಮಿಯನ್ನು ತಾಯಿಯ ಹೆಸರಲ್ಲಿ ಖರೀದಿಸಲಾಗಿದ್ದು, ಆಸ್ತಿಯಿಂದ ಬರುತ್ತಿರುವ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ.
2. ರುದ್ರಾಕ್ಷಪಾಲ್, ಸತ್ತುಪಲ್ಲಿ ಮಂಡಲ, ಖಮ್ಮಂ ಜಿಲ್ಲೆ:
ವಂಶಪಾರಂಪರ್ಯವಾಗಿ ಬಂದಿರುವ ಮನೆ, 55 ಎಕರೆ ಕೃಷಿ ಭೂಮಿ. ಈ ಭೂಮಿಯ ಈಗಿನ ಮಾರುಕಟ್ಟೆ ಮೌಲ್ಯ 2.5 ಕೋಟಿ ರೂ. ತಂದೆಯ ಹೆಸರಿನಲ್ಲಿದ್ದು ಈ ಭೂಮಿಯಿಂದ ಬರುತ್ತಿರುವ ವಾರ್ಷಿಕ ಆದಾಯ 7 ಲಕ್ಷ ರೂಪಾಯಿ.
3. ಖಮ್ಮಂ ಜಿಲ್ಲೆ:
1,300 ಚದರ ಯಾರ್ಡ್ ಭೂಮಿಯನ್ನು ಹೋಟೆಲ್ಗೆ ಲೀಸ್ ನೀಡಲಾಗಿದೆ. ಈ ಭೂಮಿಯ ಈಗಿನ ಮೌಲ್ಯ 1.5 ಕೋಟಿ ರೂ. ತಾಯಿಯ ಹೆಸರಲ್ಲಿ ಈ ಜಾಗವನ್ನು ಖರೀದಿ ಮಾಡಲಾಗಿದ್ದು, ಇದರಿಂದ ವರ್ಷಕ್ಕೆ ಬರುತ್ತಿರುವ ಆದಾಯ 1 ಲಕ್ಷ ರೂಪಾಯಿ.
4. ಖಮ್ಮಂ ಜಿಲ್ಲೆ:
ಬಾಡಿಗೆ ನೀಡಲಾಗಿರುವ ಮನೆ ಮತ್ತು 1 ಎಕರೆ ಭೂಮಿ. ಈ ಜಾಗದ ಈಗಿನ ಮೌಲ್ಯ 1 ಕೋಟಿ. ತಂದೆಯ ಹೆಸರಲ್ಲಿ ಈ ಭೂಮಿಯನ್ನು ಖರೀದಿಸಲಾಗಿದ್ದು, ಈ ಆಸ್ತಿಯಿಂದ ಬರುತ್ತಿರುವ ವಾರ್ಷಿಕ 2 ಲಕ್ಷ ರೂಪಾಯಿ.
5. ಹೈದ್ರಾಬಾದ್:
1 ಕೋಟಿ ರೂಪಾಯಿ ಮೌಲ್ಯದ 3 ಪ್ಲಾಟ್ಗಳು. ತಾಯಿಯ ಹೆಸರಲ್ಲಿ ಇದನ್ನು ಖರೀದಿಸಲಾಗಿದ್ದು, ಈ ಆಸ್ತಿಯಿಂದ ಬರುತ್ತಿರುವ ವಾರ್ಷಿಕ ಆದಾಯ ಎರಡೂವರೆ ಲಕ್ಷ ರೂಪಾಯಿ.
6. ತಲ್ಲಾಪುರ್, ಮೇದಕ್ ಜಿಲ್ಲೆ:
500 ಚದರ ಯಾರ್ಡ್ ವೀಸ್ತೀರ್ಣದ ಖಾಲಿ ಜಾಗ. ಈಗಿನ ಮೌಲ್ಯ 40 ಲಕ್ಷ ರೂಪಾಯಿ. ತಂದೆಯ ಹೆಸರಲ್ಲಿ ಈ ಭೂಮಿಯನ್ನು ಖರೀದಿಸಲಾಗಿದೆ.
7. ಶಂಸಬಾದ್, ರಂಗರೆಡ್ಡಿ ಜಿಲ್ಲೆ:
250 ಚದರ ಯಾರ್ಡ್ ಮತ್ತು 350 ಚದರ ಯಾರ್ಡ್ ವೀಸ್ತೀರ್ಣದ ಖಾಲಿ ಜಾಗ. ತಂದೆಯ ಹೆಸರಲ್ಲಿ ಈ ಭೂಮಿಯನ್ನು ಖರೀದಿಸಲಾಗಿದೆ.
8. ಬೆಂಗಳೂರು:
ಬೆಂಗಳೂರಿನ ಸೀಗೆಹಳ್ಳಿ ಲೇಔಟ್ನಲ್ಲಿರುವ ಎಂಸಿಹೆಚ್ಎಸ್ ಪ್ಲಾಟ್ ನಂಬರ್ 134. ಈ ಜನವಸತಿ ಪ್ಲಾಟ್ನ ವೀಸ್ತೀರ್ಣ 4,123 ಚದರ ಅಡಿ. ಇದು ರೋಹಿಣಿ ಸಿಂಧೂರಿ ಅವರ ಹೆಸರಲ್ಲೇ ಇರುವ ಪ್ಲಾಟ್ . ಇದನ್ನು ಅಖಿಲ ಭಾರತ ಸೇವೆ ಮೆಟ್ರೋಪಾಲಿಟನ್ ಹೌಸಿಂಗ್ ಕೋಆಪರೇಟಿವ್ ಸೊಸೈಟಿ ಮೂಲಕ ಹಂಚಿಕೆ ಮಾಡಲಾಗಿದೆ. ಈ ಪ್ಲಾಟ್ನ ಈಗಿನ ಮೌಲ್ಯ 60 ಲಕ್ಷ ರೂ.
ರೋಹಿಣಿ ಸಿಂಧೂರಿ ಅವರ ಸಂಬಳ ಎಷ್ಟು..?
ರೋಹಿಣಿ ಸಿಂಧೂರಿ ಅವರು ಸಲ್ಲಿಸಿರುವ ದಾಖಲೆ ಪ್ರಕಾರ ಅವರ ವೇತನ ಶ್ರೇಣಿ PayBand 4.
ಅಂದರೆ 7ನೇ ವೇತನ ಆಯೋಗದ ವರದಿ ಜಾರಿ ಆದ ಬಳಿಕ ಈ ಶ್ರೇಣಿಯಲ್ಲಿರುವವರಿಗೆ ಸಿಗುತ್ತಿರುವ ಮಾಸಿಕ ವೇತನ 1,18,500-2,14,100 ರೂಪಾಯಿ.
ಆಸ್ತಿ ಮಾಹಿತಿ ಮುಚ್ಚಿಟ್ರಾ ರೋಹಿಣಿ ಸಿಂಧೂರಿ..?
ಬೆಂಗಳೂರಲ್ಲಿರುವ ಆಸ್ತಿಯ ಮಾಹಿತಿಯನ್ನು ರೋಹಿಣಿ ಸಿಂಧೂರಿಯವರು ಮುಚ್ಚಿಟ್ಟಿದ್ದಾರೆ ಎಂದು ಐಜಿಪಿ ಡಿ ರೂಪಾ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ರೂಪಾ ಅವರು
ಜಾಲಹಳ್ಳಿ ಯಲ್ಲಿ ಈಕೆಯ( ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returns ನಲ್ಲಿ ಈ ಮನೆಯ ಉಲ್ಲೇಖ ಇರದೆ, ಬೇರೆಲ್ಲಾ ಲಂಗು ಲೊಟ್ಟು property ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೆ ಇಟಲಿ ಫರ್ನೀಚರ್, 26 ಲಕ್ಷದ ಜರ್ಮನ್ appliances ( ಅದನ್ನು duty free ಮಾಡಿಸಿಕೊಳ್ಳುವ ಬಗ್ಗೆ ಚರ್ಚೆ ಇರುವ , 6 lakhs ಕೇವಲ ಬಾಗಿಲಿನ hinges ಗೆ ಖರ್ಚ್ ಮಾಡಿರುವ ಬಗ್ಗೆ ಈಕೆ ಮಾಡಿರುವ ಚಾಟ್ ಗಳ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ಮೇಲೆ ಕೂಲಂಕುಷ ತನಿಖೆ ಆಗುವುದೇ ನೋಡಬೇಕಿದೆ.
ಎಂದು ಡಿ ರೂಪಾ ಅವರು ರೋಹಿಣಿ ಸಿಂಧೂರಿ ಅವರ ಸ್ಥಿರಾಸ್ತಿ ಬಗ್ಗೆ ಪಶ್ನೆಗಳನ್ನು ಕೇಳಿ್ದ್ದಾರೆ.
ಈ ಆಸ್ತಿ ಬಗ್ಗೆ ರೋಹಿಣಿ ಸಿಂಧೂರಿ ಅವರು ಕಳೆದ ತಿಂಗಳು ತಾವು ಸಲ್ಲಿಕೆ ಮಾಡಿರುವ ಸ್ಥಿರಾಸ್ತಿ ಮಾಹಿತಿಯಲ್ಲಿ ಹೇಳಿಲ್ಲ.
ಜನವರಿ 23ರಂದು ರೋಹಿಣಿ ಸಿಂಧೂರಿ ಸಲ್ಲಿಕೆ ಮಾಡಿರುವ ಸ್ಥಿರಾಸ್ತಿಗಳ ಮಾಹಿತಿಯ ದಾಖಲೆ: