SC/STಗಳಿಗೆ ಬಡಿಸಲು ಬಿಡಬೇಡಿ, ಮೈಲಿಗೆ ಆಗುತ್ತೆ – ಕಾರ್ಕಳ ಬಿಜೆಪಿ ಕಾರ್ಯಕರ್ತೆಯಿಂದ ನಿಂದನೆ -FIR ದಾಖಲು

ಎಸ್​ಸಿ/ ಎಸ್​​ಟಿಗಳನ್ನು ಊಟ ಬಡಿಸಲು  ಬಿಡಬೇಡಿ, ಮೈಲಿಗೆಯಾಗುತ್ತೆ, ಅವರಿಗೆ ಬೇರೆ ಕೆಲಸಕ್ಕೆ ಕೊಡಿ ಎಂದು ಹೇಳಿ ಜಾತಿ ನಿಂದನೆ ಮಾಡಿದರು

ಎಂಬ ಆರೋಪದಡಿ ಕಾರ್ಕಳ ಬಿಜೆಪಿ ಕಾರ್ಯಕರ್ತೆ ರಮಿತ ಶೈಲೇಂದ್ರ ಕುಮಾರ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಐಪಿಸಿ ಸೆಕ್ಷನ್​ 341, 504 ಮತ್ತು ಎಸ್​ಸಿಎಸ್​ಟಿ ದೌರ್ಜನ್ಯ ತಡೆ ಕಾಯ್ದೆ 3(1), 3(2)ರ ಅಡಿಯಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಗುರುವಾರ ಎಫ್​ಐಆರ್​ ದಾಖಲಾಗಿದೆ.

ಕಾರ್ಕಳ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಸ್ವಯಂಸೇವಕಿಯಾಗಿ ಭಾಗಿ ಆಗಿದ್ದ ವೇಳೆ ಬಿಜೆಪಿ ಕಾರ್ಯಕರ್ತೆ ರಮಿತಾ ಶೈಲೇಂದ್ರ ಜಾತಿ ನಿಂದನೆ ಮಾಡಿದ್ದಾರೆ ಕಾರ್ಕಳ ಪುರಸಭೆ ಸದಸ್ಯೆ ಪ್ರತಿಮಾ ರಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾರ್ಚ್​ 12ರಂದು ಜೀರ್ಣೋದ್ಧಾರ ಕಾರ್ಯಕ್ರಮದ ಭೋಜನಾಲಯದಲ್ಲಿ ಸಮಿತಿ ತಮಗೆ ನೀಡಿದ್ದ ಕೆಲಸವನ್ನು ಮಾಡುವ ವೇಳೆ ಸಾರ್ವಜನಿಕರ ಎದುರಲ್ಲಿ ಎಸ್​ಸಿ/ ಎಸ್​​ಟಿಗಳನ್ನು ಊಟ ಬಡಿಸಲು  ಬಿಡಬೇಡಿ, ಮೈಲಿಗೆಯಾಗುತ್ತೆ, ಅವರಿಗೆ ಬೇರೆ ಕೆಲಸಕ್ಕೆ ಕೊಡಿ ಎಂದು ಹೇಳಿ ಸಾರ್ವಜನಿಕವಾಗಿ ಜಾತಿ ನಿಂದಿಸಿ ಅವಮಾನ ಮಾಡಿದರು. ಈ ವೇಳೆ ನಾನು ಆಕ್ಷೇಪಣೆ ಮಾಡಿದ್ದು ದೇವಸ್ಥಾನದ ಕಾರ್ಯಕ್ರಮವಾಗಿದ್ದರಿಂದ ಸುಮ್ಮನಿದೆ.

ಕಾರ್ಕಳದಲ್ಲಿ ಸಚಿವ ಸುನಿಲ್​ ಕುಮಾರ್​ ಅಯೋಜಿಸಿದ್ದ ಬೈಕ್​ ರ್ಯಾಲಿಯಲ್ಲಿ ರಮಿತ ಶೈಲೇಂದ್ರ
ಕಾರ್ಕಳದಲ್ಲಿ ಸಚಿವ ಸುನಿಲ್​ ಕುಮಾರ್​ ಅಯೋಜಿಸಿದ್ದ ಬೈಕ್​ ರ್ಯಾಲಿಯಲ್ಲಿ ರಮಿತ ಶೈಲೇಂದ್ರ

ಆದರೆ ಮಾರ್ಚ್​ 14ರಂದು ದೂರವಾಣಿ ಮೂಲಕ ಮತ್ತು ರಸ್ತೆಯಲ್ಲಿ ಅಡ್ಡಗಟ್ಟಿ 

ನಾನು ಹೇಳಿದ್ದು ಹೌದು, ಎಲ್ಲಿ ಬೇಕಾದರೂ ನೀನು ದೂರು ಕೊಡು. ನೀನು ಯಾವುದೇ ದೂರು ನೀಡಿದರೂ ನಾನು ಹೆದರುವುದಿಲ್ಲ. ಏನು ಬೇಕಾದರೂ ಮಾಡು, ಯಾರನ್ನೂ ಬೇಕಾದರೂ ಕರೆಸಿಕೋ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ 

ಎಂದು ರಮಿತಾ ಶೈಲೇಂದ್ರ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಪ್ರತಿಮಾ ರಾಣೆ ಆರೋಪಿಸಿದ್ದಾರೆ.

ಮಾ್ರ್ಚ್​ 15ರವರೆಗೆ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಇದ್ದಿದ್ದರಿಂದ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ದೂರನ್ನು ಕೊಟ್ಟಿರಲಿಲ್ಲ 

ಎಂದು ಪ್ರತಿಮಾ ರಾಣೆ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here