ಆ ನಟ ಬಿಳಿ ಇಲಿ, ಹೆಣ್ಣು ಬಾಕ, ಮಾದಕ ವ್ಯಸನಿ – ರಾಮನ ಪಾತ್ರಕ್ಕೆ ಯಶ್​​ ಸೂಕ್ತ – ಕಂಗನಾ ರಣಾವತ್​

ಆ ನಟ ಹೆಣ್ಣು ಬಾಕ, ಬಿಳಿ ಇಲಿ, ಡ್ರಗ್​ ವ್ಯಸನಿ. ಇದು ಬಾಲಿವುಡ್​ ನಟಿ ಕಂಗನಾ ರಣಾವತ್​ ಇವತ್ತು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಬರಹ.

ನಿತೇಶ್​ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ನಟಿಸಲಿರುವ ರಣಬೀರ್​ ಕಪೂರ್​ ಬಗ್ಗೆ ಪರೋಕ್ಷವಾಗಿ ನಟಿ ಕಂಗನಾ ಮಾಡಿರುವ ಆರೋಪ.

ಬಾಲಿವುಡ್​ನಲ್ಲಿ ರಾಮಾಯಣ ಎಂಬ ಸಿನಿಮಾವೊಂದು ಬರುತ್ತಿರುವ ಬಗ್ಗೆ ಇತ್ತೀಚೆಗೆ ಸುದ್ದಿ ತಿಳಿಯಿತು. ಬಳಿ ಚರ್ಮದ ಇಲಿ (ನಟನೆಂದು ಕರೆಸಿಕೊಂಡಿರುವ). ಈತ ಹೆಣ್ಣು ಬಾಕ ಮತ್ತು ಮಾದಕ ವ್ಯಸನಿ ಮತ್ತು ತನ್ನನ್ನು ತಾನು ಶಿವನೆಂದು ಕರೆಸಿಕೊಳ್ಳುವ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ  ಈ ಚಿತ್ರದಲ್ಲಿ ರಾಮನ ವೇಷ ಧರಿಸುತ್ತಿದ್ದಾನೆ.

ಸ್ವಯಂಪರಿಶ್ರಮದಿಂದ ಮೇಲೆ ಬಂದಿರುವ ದಕ್ಷಿಣ ಭಾರತದ ಸೂಪರ್​ಸ್ಟಾರ್​, ಸಂಪ್ರದಾಯಿಕ ಕುಟುಂಬಸ್ಥನಾಗಿರುವ ನಟ ವಾಲ್ಮೀಕಿ ರಾಮಾಯಣದ ಪ್ರಕಾರ ಭಗವಾನ್​ ರಾಮನ ಪಾತ್ರಕ್ಕೆ ಹೊಂದುವ ಗುಣಲಕ್ಷಣಗಳು ಮತ್ತು ಮುಖ ಲಕ್ಷಣಗಳು ಹೊಂದುತ್ತಿವೆ, ಆದರೆ ಅವರಿಗೆ ರಾವಣನ ಪಾತ್ರವನ್ನು ನೀಡಲಾಗಿದೆ. ಇದು ಯಾವ ಸೀಮೆಯ ಕಲಿಯುಗ..? ಬಿಳಿ ಚರ್ಮದ ಮಾದಕ ವ್ಯಸನಿ ಹುಡುಗ ರಾಮನ ಪಾತ್ರ ಮಾಡುವುದು ಬೇಡ.. ಜೈಶ್ರೀರಾಮ್​  

ಎಂದು ನಟಿ ಕಂಗನಾ ರಣಾವತ್​ ಹೇಳಿದ್ದಾರೆ.

ಈ ಮೂಲಕ ರಣಬೀರ್​ ಕಪೂರ್​ ಮಾದಕ ವ್ಯಸನಿ, ಹೆಣ್ಣು ಬಾಕ, ಮಹಿಳೆಯರಿಗೆ ಕಿರುಕುಳ ನೀಡುವವ ಎಂದು ಬಹಿರಂಗ ಆರೋಪ ಮಾಡಿದ್ದಾರೆ. 

ರಾಕಿಂಗ್​ ಸ್ಟಾರ್​ ಯಶ್​ ಅವರು ರಾವಣನ ಬದಲು ರಾಮನ ಪಾತ್ರಕ್ಕೆ ಸೂಕ್ತ ಎಂಬ ವಾದ ಮಂಡಿಸಿದ್ದಾರೆ.