ಪಂಜಾಬ್ ರಾಜ್ಯದ ಆಮ್ ಆದ್ಮಿ ಪಕ್ಷದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಹೆಚ್ಚಳ ಮಾಡಿದೆ.
ಲೀಟರ್ ಪೆಟ್ರೋಲ್ಗೆ 96 ಪೈಸೆ ಹೆಚ್ಚಳ ಮಾಡಲಾಗಿದೆ. ಲೀಟರ್ ಡೀಸೆಲ್ಗೆ 88 ಪೈಸೆ ಹೆಚ್ಚಳ ಮಾಡಲಾಗಿದೆ.
ಈ ಏರಿಕೆಯೊಂದಿಗೆ ಪಂಜಾಬ್ನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 98 ರೂಪಾಯಿ 65 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ಗೆ 88 ರೂಪಾಯಿ 95 ಪೈಸೆ ಆಗಲಿದೆ.
ಈ ತೆರಿಗೆ ಹೆಚ್ಚಳದೊಂದಿಗೆ ರಾಜ್ಯ ಸರ್ಕಾರಕ್ಕೆ 600 ಕೋಟಿ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಈ ವರ್ಷದ ಫೆಬ್ರವರಿಯಲ್ಲೂ ಆಮ್ ಆದ್ಮಿ ಪಕ್ಷದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ಗೆ 90 ಪೈಸೆಯಷ್ಟು ವ್ಯಾಟ್ ತೆರಿಗೆ ಹೆಚ್ಚಳ ಮಾಡಿತ್ತು.
ಫೆಬ್ರವರಿಯಲ್ಲಾದ ತೆರಿಗೆ ಹೆಚ್ಚಳದಿಂದ ಸರ್ಕಾರಕ್ಕೆ 300 ಕೋಟಿ ರೂಪಾಯಿಯಷ್ಟು ಹೆಚ್ಚುವರಿ ವಾರ್ಷಿಕ ಆದಾಯದ ನಿರೀಕ್ಷೆ ಮಾಡಲಾಗಿತ್ತು.
ADVERTISEMENT
ADVERTISEMENT