Justice PB Varale : ರಾಜ್ಯ ಹೈಕೋರ್ಟ್​ ಸಿಜೆಯಾಗಿ ಪಿ.ಬಿ ವರಾಳೆ ನೇಮಕಕ್ಕೆ ಶಿಫಾರಸ್ಸು

Justice PB Varale

ಕರ್ನಾಟಕ ರಾಜ್ಯ ಹೈಕೋರ್ಟ್​​ನ ಮುಖ್ಯ ನ್ಯಾಯಾಧೀಶರನ್ನಾಗಿ​​ ಪಿಬಿ ವರಾಳೆ (Justice PB Varale) ಅವರನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್​​ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಬಾಂಬೆ ಹೈಕೋರ್ಟ್​ನ ನ್ಯಾಯಾಧೀಶರಾಗಿದ್ದ ಇವರು ಇದೀಗ, ರಾಜ್ಯ ಹೈಕೋರ್ಟ್​​ನ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ.

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಕೊಲಿಜಿಯಂ ಮಂಡಳಿ ಇದೇ 28 ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಪಿಬಿ ವರಾಳೆ ಸೇರಿದಂತೆ ಬಾಂಬೆ ಹೈಕೋರ್ಟ್​ನ ಮೂವರು ನ್ಯಾಯಾಧೀಶರನ್ನು ಇತರೆ ರಾಜ್ಯಗಳ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ : ರಾಜ್ಯ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಲೋಕ್ ಆರಾಧೆ ನೇಮಕ

ನ್ಯಾಯಮೂರ್ತಿ ವರಾಳೆ (Justice PB Varale) ಬಾಂಬೆ ಹೈಕೋರ್ಟ್​ನ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಇವರು ವಕೀಲರಾಗಿ 1985 ರ ಅಗಸ್ಟ್​ ನಲ್ಲಿ ನೋಂದಣಿಯಾಗಿದ್ದಾರೆ. ವಕೀಲ ಎಸ್​​ಎನ್ ಲೋಯಾ ಅವರ ಗರಡಿಯಲ್ಲಿ ಪಳಗಿದ ಇವರು 1992 ರ ವರೆಗೆ ಔರಂಗಾಬಾದ್​ನ ಅಂಬೇಡ್ಕರ್ ಲಾ ಕಾಲೇಜಿನಲ್ಲಿ ಪ್ರಾಧ್ಯಾಫಕರಾಗಿ ಸೇವೆ ಸಲ್ಲಿಸಿದ್ದಾರೆ.

ಇವರನ್ನು ಜುಲೈ 18, 2008 ರಲ್ಲಿ ಬಾಂಬೆ ಹೈಕೋರ್ಟ್​ನ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು.

ಪ್ರಸ್ತು, ರಾಜ್ಯ ಹೈಕೋರ್ಟ್​ನಲ್ಲಿ ನ್ಯಾಯಮೂರ್ತಿ ಅಲೋಕ್ ಅರಾಧೆಯವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : Breaking News : ದೇಶದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಪ್ರಮಾಣವಚನ