Breaking News : ಬಿಬಿಎಂಪಿ ಚುನಾವಣೆಗೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್​ ಖಡಕ್ ಸೂಚನೆ

BBMP Election

ಬಿಬಿಎಂಪಿ ಚುನಾವಣೆ (BBMP Election) ನಡೆಸಲು ಇಂದು ಶುಕ್ರವಾರ ಹೈಕೋರ್ಟ್​ ಗ್ರೀನ್ ಸಿಗ್ನಲ್ ನೀಡಿದ್ದು, ಡಿ. 31 ರ ಒಳಗಾಗಿ ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬಿಬಿಎಂಪಿ ಕ್ಷೇತ್ರವಾರು ಮೀಸಲಾತಿ ಬಗ್ಗೆ ನಡೆದ ವಿಚಾರಣೆಯಲ್ಲಿ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ನಾಲ್ಕು ತಿಂಗಳ ಕಾಲಾವಕಾಶ ಕೇಳಿದ್ದ ಸರ್ಕಾರದ ನಿರ್ಧಾರವನ್ನು ತಿರಸ್ಕರಿಸಿದ ಕೋರ್ಟ್​. ಡಿಸೆಂಬರ್ ಅಂತ್ಯದ ವೇಳೆಗೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ : BIG BREAKING: ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸಿ ಆದೇಶ – ಮತದಾರರ ಪಟ್ಟಿ ತಯಾರಿಗೆ ಸೂಚನೆ

ಮುಂದಿನ ಎರಡು ತಿಂಗಳ ಒಳಗಾಗಿ, ನವೆಂಬರ್ 30 ರಂದು ಮೀಸಲಾತಿ ಪಟ್ಟಿ ಪರಿಶೀಲನೆ ಮಾಡಿ ಬಿಡುಗಡೆ ಮಾಡಬೇಕು. 30 ದಿನಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ನಡೆಸಬೇಕು. ಈ ವರ್ಷಾಂಥ್ಯದ ವೇಳೆಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್​​ ಸರ್ಕಾರಕ್ಕೆ ಸೂಚನೆ ನೀಡಿದೆ.

ಇದುವರೆಗೂ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆನ್ನು (BBMP Election) ಮುಂದೂಡುತ್ತಲೇ ಬಂದಿತ್ತು. ಇದೀಗ, ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ. ಮುಂದಿನ ವಿದಾನಸಭಾ ಚುನಾವಣೆ ಮಾರ್ಚ್​ ಅಥವಾ ಏಪ್ರೀಲ್​ ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಲಿ ಬಿಬಿಎಂಪಿ ಚುನಾವಣೆ ಬೆಂಗಳೂರು ನಗರ ಮತ್ತು ಬೆ.ಗ್ರಾಮಾಂತರ ವಿದಾನಸಭಾ ಕ್ಷೇತ್ರಗಳಿಗೆ ದಿಕ್ಸೂಚಿಯಾಗಲಿವೆ.

LEAVE A REPLY

Please enter your comment!
Please enter your name here