ಇಂದು ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಮಯೂರ್ಭಂಜ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ವೇಳೆ ತಾವು ಭಾಷಣವನ್ನು ನಿಲ್ಲಿಸುವ ಪ್ರಸಂಗ ನಡೆಯಿತು.
ಸಮಾವೇಶದಲ್ಲಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಸಾರ್ವಜನಿಕರು ಸೇರಿದ್ದರು. ಮೋದಿ ಭಾಷಣ ಶುರು ಮಾಡುತ್ತಿದ್ದಂತೆಯೇ ಕಾರ್ಯಕ್ರಮದ ವರದಿಗಾಗಿ ಬಂದಿದ್ದ ಪತ್ರಕರ್ತರೊಬ್ಬರು ಪ್ರಜ್ಞೆ ತಪ್ಪಿ ಬಿದ್ದರು. ಇದನ್ನು ತಿಳಿದ ಮೋದಿ ತಮ್ಮ ಭಾಷಣವನ್ನು ನಿಲ್ಲಿಸಿ ಅಸ್ವಸ್ಥ ಪತ್ರಕರ್ತನ ಆರೋಗ್ಯದ ಕುರಿತು ವಿಚಾರಿಸಿದರು.
ಅಲ್ಲದೆ ಅವರ ವೈದ್ಯಕೀಯ ತಂಡವನ್ನು ಕರೆದು, ಕೂಡಲೇ ಆ ಪತ್ರಕರ್ತನ ತಪಾಸಣೆಗೆ ಸೂಚಿಸಿದರು. ಆತನಿಗೆ ಬೇಗ ಯಾರಾದರೂ ನೀರು ಕೊಡಿ. ಅವರಿಗೆ ಗಾಳಿ ಬೇಕಾಗಿದೆ ಎಲ್ಲರೂ ಸ್ವಲ್ಪ ದೂರ ಸರಿಯಿರಿ. ನಮ್ಮ ವೈದ್ಯರ ತಂಡ ಆತನನ್ನು ತಪಾಸಣೆ ಮಾಡುತ್ತದೆ. ನೀವು ಯಾರೂ ಚಿಂತಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ಮೋದಿಯವರ ಸೂಚನೆಯಂತೆ ಅಸ್ವಸ್ಥ ಪತ್ರಕರ್ತನಿಗೆ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಆತನನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.