ಹೈದರಾಬಾದ್ ವಲಯ ನವೋದಯ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಮಹಾ ಸಂಗಮ

ಹೈದರಾಬಾದ್ ವಲಯ ನವೋದಯ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಸಮಾವೇಶ ಬೆಂಗಳೂರು ನಗರ ಜಿಲ್ಲೆ ಬಾಗಲೂರಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಅದ್ದೂರಿಯಾಗಿ ನಡೆಯಿತು. 5000 ಹೆಚ್ಚು ಜನ ಸೇರಿ ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.

ಮುಖ್ಯ ಅತಿಥಿಗಳಾದ ನವೋದಯ ಸಮಿತಿ ಆಯುಕ್ತರಾದ ವಿನಾಯಕ ಗರ್ಗ್ ಮಾತನಾಡಿ, ಇಷ್ಟು ದೊಡ್ಡಮಟ್ಟದ ಸಮಾರಂಭ ನೋಡಿ ಖುಷಿಯಾಯಿತು. ಯಾವ ರಾಜ್ಯದಲ್ಲೂ ಇಂತಹ ಅದ್ದೂರಿ ಸಮಾರಂಭ ಮಾಡಿರಲಿಲ್ಲ. ನವೋದಯ ಕುಟುಂಬಕ್ಕೆ ಸೇರಿದ್ದು ನನ್ನ ಭಾಗ್ಯ ಎಂದರು.ಮುಂದೆ ಇಂತಹ ಸಮಾರಂಭಗಳು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.

ಹೈದರಾಬಾದ್ ವಲಯ ಉಪ ಆಯುಕ್ತರಾದ ಗೋಪಾಲಕೃಷ್ಣ ಮಾತನಾಡಿ, ಭಾರತದ ನವೋದಯ ವಿದ್ಯಾಲಯ ಗಳಲ್ಲಿ ಹೈದರಾಬಾದ್ ವಲಯ ವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಿವೆ. ಕರ್ನಾಟಕದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಹೆಚ್ಚು ಸಾಮಾಜಿಕ ಕಾರ್ಯ ಮಾಡುತ್ತಿವೆ ಎಂದರು.

ವಿಜಯಪುರ ನವೋದಯ ಹಳೆ ವಿದ್ಯಾರ್ಥಿ.. ಈಗ ಬೆಂಗಳೂರು ಪೂರ್ವ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಭೀಮಾಶಂಕರ ಗುಳೇದ್ ಮಾತನಾಡಿ, ನವೋದಯ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾವು ನವೋದಯ ವಿದ್ಯಾರ್ಥಿಯಾಗಿದ್ದು ನಮ್ಮ ಪುಣ್ಯ ಎಂದು ಅಭಿಪ್ರಾಯಪಟ್ಟರು.

ಹಳೆ ವಿದ್ಯಾರ್ಥಿಗಳಾದ ಇಂಕಮ್ ಟ್ಯಾಕ್ಸ್ ಅಧಿಕಾರಿ ಕಿರಣ್ ಕುಮಾರ್, ಡಿಸಿಪಿ ಶರಣಪ್ಪ, ರಾಜಶೇಖರ್ ಜಾಕ, ತುಮಕೂರು ಜೆಎನ್​ವಿಯ ಹಳೆ ವಿದ್ಯಾರ್ಥಿ ಡಾ.ಸುದರ್ಶನ್, ಚಿತ್ರದುರ್ಗ ಜೆಎನ್​ವಿ ಹಳೆ ವಿದ್ಯಾರ್ಥಿ ಡಾ.ಯೋಗಾನಂದ್​,  ಬೆಂಗಳೂರು ನಗರ ಜೆಎನ್​ವಿಯ ಹಳೆಯ ವಿದ್ಯಾರ್ಥಿ ಸುಪ್ರೀತ್, ಕೇಶವ್ ವಿನಯ್, ಹರೀಶ್,ಮಂಜುನಾಥ್, ನವೀನ್,ಸೋಮೇಶ್ ನವೋದಯ,ತಾರಾನಾಥ್, ಶ್ರೀನಿವಾಸ್ ಹಾಗೂ ಸಮಿತಿ ಅಧಿಕಾರಿಗಳು, ಸಾವಿರಾರು ಹಳೆ ವಿದ್ಯಾರ್ಥಿಗಳು ಮತ್ತು ಕುಟುಂಬದವರು ಭಾಗವಹಿಸಿದ್ದರು.

ಇಂಗ್ಲಿಷ್ ಶಿಕ್ಷಕರಾದ ಪ್ರಹ್ಲಾದ್ ಹಾಗೂ ಆರ್ ಜೆ ರಶೀದ್ ನಿರೂಪಿಸಿದರು. ಕರ್ನಾಟಕ, ಆಂದ್ರ,ತೆಲಂಗಾಣ,ಕೇರಳ ಅಂಡಮಾನ್,ಪುದುಚೇರಿ ರಾಜ್ಯಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಕ್ತದಾನ ಶಿಬಿರ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು. ಬೆಂಗಳೂರು ನಗರ ಜೆಎನ್​ವಿಯ ಹಾಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬಾಗಲೂರು ನವೋದಯ ಅಚ್ಚುಕಟ್ಟಾಗಿ ಸಮಾರಂಭ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here