ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ( J P Nadda) 2024ರ ಲೋಕಸಭಾ ಚುನಾವಣೆವರೆಗೂ (Loksabha Election) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ 2024ರವರೆಗೂ ನಡ್ಡಾ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸುವ ಬಗ್ಗೆ ಪಕ್ಷ ಯೋಚಿಸುತ್ತಿದೆ.
ನಡ್ಡಾ ಅವರ ಅಧ್ಯಕ್ಷೀಯ ಅವಧಿ 2023ರ ಜನವರಿಗೆ ಅಂತ್ಯ ಆಗಲಿದೆ.
2020ರ ಜನವರಿಯಲ್ಲಿ ಅಮಿತ್ ಶಾ (Amit Shah) ಅವರ ಬಳಿಕ ನಡ್ಡಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಸಾರಥ್ಯ ವಹಿಸಿಕೊಂಡಿದ್ದರು.
ADVERTISEMENT
ADVERTISEMENT