ಮೂರು ಬಣ್ಣಗಳ ಹೊಸ ಪಕ್ಷ ಕಟ್ಟಿದ ಮಾಜಿ ಮುಖ್ಯಮಂತ್ರಿ ಆಜಾದ್​

Gulam Nabi Azad launches new party
Gulam Nabi Azad launches new party
ಜಮ್ಮು-ಕಾಶ್ಮೀರದ (Jammu Kashmir) ಮಾಜಿ ಮುಖ್ಯಮಂತ್ರಿ ಮತ್ತು ಒಂದು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್​​ ತೊರೆದಿದ್ದ ಗುಲಾಂ ನಬಿ ಆಜಾದ್​ (Gulam Nabi Azad) ತಮ್ಮದೇ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ನಬಿ ಅವರ ಹೊಸ ಪಕ್ಷದ ಹೆಸರು ಡೆಮಾಕ್ರಾಟಿಕ್​ ಆಜಾದ್​ ಪಕ್ಷ (Democratic Azad Party). ತಮ್ಮ ಪಕ್ಷವನ್ನು ಹಿಂದೂಸ್ತಾನಿ ಪಕ್ಷ ಎಂದು ಆಜಾದ್​ ಕರೆದುಕೊಂಡಿದ್ದಾರೆ. ಉರ್ದು ಮತ್ತು ಹಿಂದೂ ಮಿಶ್ರಿತ ಮಾತುಗಳನ್ನ ನಮ್ಮ ಮನೆಯಲ್ಲಿ ಮಾತಾಡ್ತಾರೆ, ಅದು ಹಿಂದೂಸ್ತಾನಿ ಎಂದು ನೆಹರು ಹೇಳುತ್ತಿದ್ದರು ಎಂದು ಆಜಾದ್​ ಹೇಳಿದ್ದಾರೆ.
ಹೊಸ ಪಕ್ಷದ ಬಾವುಟವನ್ನೂ ಅನಾವರಣಗೊಳಿಸಿದ್ದಾರೆ. ಆ ಬಾವುಟದಲ್ಲಿ ಮೂರು ಬಣ್ಣಗಳಿವೆ, ಕಡುನೀಲಿ, ಬಿಳಿ ಮತ್ತು ಹಳದಿ.
ಆಜಾದ್​ ಅವರ ಪ್ರಕಾರ ಅವರ ಪಕ್ಷದ ಧ್ವಜದಲ್ಲಿರುವ ಮೂರು ಬಣ್ಣಕ್ಕೂ ಒಂದೊಂದು ಅರ್ಥ ಇದೆ.
ಹಳದಿ ಬಣ್ಣ: ಕ್ರಿಯಾತ್ಮಕತೆ, ಯೋಚನಾಶೀಲತೆ ಮತ್ತು ವಿವಿಧತೆಯಲ್ಲಿ ಏಕತೆ.
ಬಿಳಿ ಬಣ್ಣ: ಶಾಂತಿ ಮತ್ತು ಸಹೋದರತ್ವ
ಕಡು ನೀಲಿ: ಮುಕ್ತತೆ ಮತ್ತು ಸಮುದ್ರದಷ್ಟು ಆಳಕ್ಕೆ ಮತ್ತು ಆಕಾಶದಷ್ಟು ಎತ್ತರಕ್ಕೆ ಆಲೋಚನಾ ಸ್ವಾತಂತ್ರ್ಯ ಮತ್ತು ಸಹಿಷ್ಣುತೆ.
ಜಮ್ಮು ಹಾಗೂ ಕಾಶ್ಮೀರದ ಜನರ ನಡುವೆ ಕಟ್ಟಲಾಗಿರುವ ತಡೆಗೋಡೆಯನ್ನು ಒಡೆದುಹಾಕಬೇಕು ಮತ್ತು ಪರಸ್ಪರ ಒಬ್ಬೊರಿಗೊಬ್ಬರು ಅವಲಂಬಿಗಳು ಎಂದು ಆಜಾದ್​ ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma Gandhi) ಮತ್ತು ಜವಾಹರ್​ಲಾಲ್​ ನೆಹರು (Nehru) ಅವರ ಆಲೋಚನೆಗಳನ್ನು ಪಕ್ಷದಲ್ಲಿ ಅಳವಡಿಸಿಕೊಳ್ಳುವುದಾಗಿ ಆಜಾದ್​ ಹೇಳಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವುದು ಆಜಾದ್​ ಪಕ್ಷದ ಚುನಾವಣಾ ವಿಷಯ ಆಗಬಹುದು, ಆದರೆ ರದ್ದಾಗಿರುವ ವಿಶೇಷ ಸ್ಥಾನಮಾನ ಮತ್ತೆ ಕೊಡಿಸುವಷ್ಟು ನಾನೀಗ ಶಕ್ತನಲ್ಲ ಎಂದು ಆಜಾದ್​ ಹೇಳಿದ್ದಾರೆ.