ಇಂಡಿಯನ್ ರೈಲ್ವೇ.. ನಮ್ಮ ದೇಶದಲ್ಲಿ ಪ್ರತಿ ನಿತ್ಯ ಲಕ್ಷ ಲಕ್ಷ ಮಂದಿಯನ್ನು ಗಮ್ಯಸ್ಥಾನಗಳಿಗೆ ಸೇರಿಸುತ್ತೆ. ಬರೀ ಪ್ರಯಾಣ ಸೌಕರ್ಯಗಳನ್ನು ಮಾತ್ರ ರೈಲ್ವೇ ಇಲಾಖೆ ಒದಗಿಸುತ್ತದೆ ಎಂದು ಬಹುತೇಕರು ಭಾವಿಸುತ್ತಾರೆ. ಈ ಸಂಸ್ಥೆ ಒದಗಿಸುವ ತುಂಬಾ ಸೌಲಭ್ಯಗಳ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ.
ರೈಲು ಪ್ರಯಾಣ ಮಾಡುವವರು ಸ್ಪೇಷನ್‌ನಲ್ಲಿ ಹೆಚ್ಚು ಸಮಯ ಕಾಯಬೇಕಾಗಿ ಬಂದಾಗ ಕೆಲವರು ಪ್ಲಾಟ್‌ಫಾರಂನಲ್ಲಿ ಉಳಿದುಬಿಡುತ್ತಾರೆ. ಇನ್ನೂ ಕೆಲವರು ಸಮೀಪದ ಹೋಟೆಲ್ ರೂಂ ಬುಕ್ ಮಾಡಿಕೊಳ್ಳುತ್ತಾರೆ. ಆದರೆ, ರೈಲ್ವೇ ನಿಲ್ದಾಣದಲ್ಲಿಯೇ ಹೋಟೆಲ್ ರೂಂನಂತಹ ಸೌಲಭ್ಯಗಳು ಲಭ್ಯ ಇರುತ್ತವೆ. ಅತೀ ಕಡಿಮೆ ಖರ್ಚಿನಲ್ಲಿ ರೂಂ ಬುಕ್ ಮಾಡಿಕೊಳ್ಳಬಹುದು. ಅವುಗಳನ್ನು ರಿಟೈನಿಂಗ್ ರೂಂ ಎನ್ನುತ್ತಾರೆ.
ರೈಲ್ವೇ ಸ್ಟೇಷನ್‌ನಲ್ಲಿ ಎಸಿ, ನಾನ್ ಎಸಿ ಕೊಠಡಿ, ಸಿಂಗಲ್-ಡಬಲ್ ಬೆಡ್ ಲಭ್ಯ ಇರುತ್ತವೆ. ಬೇಡಿಕೆಗೆ ತಕ್ಕಂತೆ ದರಗಳು ನೂರು ರೂಪಾಯಿಯಿಂದ 900 ರೂಪಾಯಿವರೆಗೂ ಇರುತ್ತದೆ. ತುಂಬಾ ಸಂದರ್ಭಗಳಲ್ಲಿ ಕೇವಲ 100 ರೂಪಾಯಿಗೆಲ್ಲಾ ರೂಮ್ ಸಿಗುತ್ತವೆ.
ಈ ರಿಟೈನಿಂಗ್ ರೂಮ್‌ಗಳನ್ನು ಬುಕ್ ಮಾಡಿಕೊಳ್ಳಲು ಟಿಕೆಟ್ ಕನ್ಫರ್ಮ್ ಆಗಿರಬೇಕು. ಇಲ್ಲದಿದ್ದಲ್ಲಿ ರೂಮ್ ಬುಕ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಸೌಲಭ್ಯ ದೊಡ್ಡ ದೊಡ್ಡ ನಿಲ್ದಾಣಗಳಲ್ಲಿ ಮಾತ್ರ ಇರುತ್ತದೆ.
ರಿಟೈನಿಂಗ್ ರೂಂ ಹೀಗೆ ಬುಕ್ ಮಾಡಿಕೊಳ್ಳಿ.
* ಟಕೆಟ್ ಕನ್ಫರ್ಮ್ ಆದ ಪ್ಯಾಸೆಂಜರ್‌ಗಳು ಮೊದಲು ಐಆರ್‌ಸಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಬೇಕು
* ಆ ನಂತರ ಮೈ ಬುಕಿಂಗ್ಸ್ ಆಪ್ಶನ್ಸ್‌ಗೆ ಹೋಗಬೇಕು. ಟಿಕೆಟ್ ಬುಕಿಂಗ್ ಕೆಳಗೆ ರಿಟೈನಿಂಗ್ ರೂಮ್ಸ್ ಎಂಬ ಆಪ್ಶನ್ ಕಾಣಿಸುತ್ತದೆ.
* ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೇ ರೂಂ ಬುಕ್ ಮಾಡಿಕೊಳ್ಳುವ ಆಯ್ಕೆ ಕಾಣಿಸುತ್ತದೆ.
* ಆ ಆಪ್ಶನ್‌ನಲ್ಲಿ ನಿಮ್ಮ ಟಿಕೆಟ್ ಪಿಎನ್‌ಆರ್ ನಂಬರ್ ಸರ್ಚ್ ಮಾಡಬೇಕು
* ನೀವು ಯಾವ ಸ್ಟೇಷನ್‌ನಲ್ಲಿ ಉಳಿದುಕೊಳ್ಳಲು ಬಯಸಿದ್ದೀರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು
* ಅಲ್ಲಿ ನಿಮ್ಮ ಪರ‍್ಸನಲ್ ಮಾಹಿತಿ, ಪ್ರಯಾಣದ ಸಮಯದಂತಹ ವಿವರಗಳನ್ನು ತುಂಬಬೇಕು
* ಚೆಕ್ ಇನ್, ಚೆಕ್ ಔಟ್, ಬೆಡ್ ಟೈಪ್, ಎಸಿ, ನಾನ್ ಎಸಿ.. ಹೀಗೆ ಆಯ್ಕೆಗಳು ಇರುತ್ತವೆ.. ಮಾಹಿತಿ ನೀಡಬೇಕು
* ಖಾಲಿ ಎಲ್ಲಿದೆ ಎಂಬುದನ್ನು ನೋಡಿಕೊಂಡು ರೂಮ್ ಬುಕ್ ಮಾಡಬೇಕು
* ರೂಂ ನಂಬರ್, ಐಡಿ ಕಾರ್ಡ್ ಟೈಪ್ ಆಯ್ಕೆ ಮಾಡಿಕೊಂಡ ಬಳಿಕ ಪೇಮೆಂಟ್ ಮಾಡಬೇಕು.