ಮಹಿಳಾ ASI ಜೊತೆಗೆ IPS ಅಧಿಕಾರಿ ಅಕ್ರಮ ಸಂಬಂಧ – ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದ ಇಬ್ಬರೂ – ದೂರು ದಾಖಲು

ಐಪಿಎಸ್​ ಅಧಿಕಾರಿ ಅರುಣ್​ ರಂಗರಾಜ್​ ವಿರುದ್ಧ ಮಹಿಳಾ ಎಎಸ್​ಐ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಸಂಬಂಧ ಮಹಿಳಾ ಎಎಸ್​ಐ ಪತಿ ದೂರು ನೀಡಿದ್ದಾರೆ.

ಕಲಬುರಗಿ ಆಂತರಿಕ ಭದ್ರತಾ ದಳದ ಎಸ್​ಪಿ ಆಗಿರುವ ಅರುಣ್​ ರಂಗರಾಜನ್​ ವಿರುದ್ಧ ಮಹಿಳಾ ಎಎಸ್​ಐ ಪತಿಯೂ ಆಗಿರುವ ಹೆಡ್​ಕಾನ್ಸ್​ಸ್ಟೇಬಲ್​ ಕಂಟೆಪ್ಪ ದೂರು ನೀಡಿದ್ದಾರೆ.

ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪತ್ನಿ ಮತ್ತು ಎಸ್​ಪಿ ವಿರುದ್ಧ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಐಪಿಎಸ್ ಸೆಕ್ಷನ್ 323 , 324 , 498 , 376(2)(b), 342, 504, 506(2)507, 420, 406, 500, 201, 109, 457,ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮೂರು ವರ್ಷಗಳಿಂದ ಮಹಿಳಾ ಎಎಸ್​ಐ ಮತ್ತು ಐಪಿಎಸ್​ ಅರುಣ್​ ರಂಗರಾಜನ್​ ಆಂತರಿಕ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹಲವು ತಿಂಗಳಿಂದ ಇವರಿಬ್ಬರ ಜೊತೆಗೆ ಸಂಬಂಧ ಇರುವ ಬಗ್ಗೆ ಕಂಟೆಪ್ಪ ಅವರಿಗೆ ಗೊತ್ತಿತ್ತು. ತಿದ್ದಿಕೊಳ್ಳುವಂತೆ ಹಲವು ಬಾರಿ ಬುದ್ಧಿ ಹೇಳಿದ್ದರು.

ನಿನ್ನೆ ಕಲಬುರಗಿ ನಗರದ ಐವಾನ್ ಶಾಹೀ ಬಡವಾಣೆಯ ಪಿಡಬ್ಲುಡಿ ಕ್ವಾಟರ್ಸ್ ನಲ್ಲಿರುವ ಐಪಿಎಸ್​ ಅರುಣ್​ ಅವರ ಮನೆಯಲ್ಲಿ ತನ್ನ ಇರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.

ಈ ವೇಳೆ ಕಂಟೆಪ್ಪ ಅವರು ಇಬ್ಬರೂ ಒಟ್ಟಿಗೆ ಇರುವ ವೀಡಿಯೋವನ್ನೂ ಮಾಡಿದ್ದಾರೆ. ವೀಡಿಯೋ ಮಾಡಿದ ತಮ್ಮ ಮೇಲೆ ಐಪಿಎಸ್​ ಅಧಿಕಾರಿ ಮತ್ತು ತಮ್ಮ ಪತ್ನಿ ಹಲ್ಲೆಗೆ ಯತ್ನಿಸಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದೂ ಕೆಂಟಪ್ಪ ದೂರಿದ್ದಾರೆ.

LEAVE A REPLY

Please enter your comment!
Please enter your name here