ತುಂಬಾ ಖುಷಿಯಾದಾಗ.. ತುಂಬಾ ನೋವಾದಾಗ.. ಭಾವೋದ್ವೇಗಕ್ಕೆ ಒಳಗಾದಾಗ ತಮಗೆ ಅರಿವಿಲ್ಲದೆಯೇ ಕಣ್ಣೀರು (Tears) ಬರುತ್ತದೆ. ತುಂಬಾ ಮಂದಿ ಒತ್ತರಿಸಿ ಬರುವ ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ, ಅಳುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳಿತು ಆಗಲಿದೆ ಎಂದು ತಜ್ಞರು ಹೇಳುತ್ತಾರೆ.
ಕಣ್ಣಿಂದ ಜಾರುವ ನೀರಿನಲ್ಲಿ ಮೂರು ವಿಧ. ಒಂದೊಂದು ಕಣ್ಣೀರು ಒಂದೊಂದು ರೀತಿಯಲ್ಲಿ ಕಣ್ಣಿಗೆ ಸಹಾಯ ಮಾಡುತ್ತವೆ.
ಬಾಸಲ್ ಟಿಯರ್ಸ್ (Basel Tears)- ನಿಮಿಷಕ್ಕೆ ಒಂದರಿಂದ ಎರಡು ಮೈಕ್ರೋ ಲೀಟರ್‌ವರೆಗೂ ನೀರು ಉತ್ಪತ್ತಿ ಆಗುತ್ತದೆ. ಇವು ಕಣ್ಣುಗಳನ್ನು ತೇವಾಂಶಭರಿತವಾಗಿ ಇಡುವುದರ ಜೊತೆಗೆ ಇನ್‌ಫೆಕ್ಷನ್‌ನಿಂದ ಕಾಪಾಡುತ್ತವೆ.
ರೆಫ್ಲೆಕ್ಸ್ ಟಿಯರ್ಸ್ (Reflex Tears ) – ಈರುಳ್ಳಿ ಕಟ್ ಮಾಡಿದಾಗ.. ಕಣ್ಣಿಗೆ ಆಕಸ್ಮಿಕವಾಗಿ ಏನಾದರೂ ತಾಕಿದಾಗ.. ಧೂಳು ಬಿದ್ದಾಗ ಕಣ್ಣೀರು ಬರುತ್ತದೆ. ಇವು ಕಣ್ಣಲ್ಲಿ ಬಿದ್ದ ಧೂಳನ್ನು ಹೊರಗೆ ಕಳಿಸಲು.. ಕಣ್ಣಿನ ಉರಿಯನ್ನು ತಗ್ಗಿಸಲು ನೆರವಾಗುತ್ತವೆ.
ಎಮೋಷನಲ್ ಟಿಯರ್ಸ್ (Emotional Tears )- ಹೆಚ್ಚಾಗಿ ಭಾವೋದ್ವೇಗಕ್ಕೆ ಒಳಗಾದಾಗ ಕಣ್ಣೀರು ಒತ್ತರಿಸಿ ಬರುತ್ತದೆ. ಇದರಿಂದ ಮನುಷ್ಯನಲ್ಲಿನ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.
ಆಳು ಎನ್ನುವುದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುವ ಸಮಾಧಾನ. ಅಳು ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತದೆ. ನೆಮ್ಮದಿ ಮೂಡಿಸುತ್ತದೆ.
ಶರೀರದ ಮೇಲಿನ ಗಾಯದಿಂದ ಆಗುವ ನೋವು.. ಮನಸ್ಸಿಗೆ ಆದ ಆಘಾತದಿಂದ ಆದ ನೋವನ್ನು ಅಳು ಎನ್ನುವುದು ಕಡಿಮೆ ಮಾಡುತ್ತದೆ.
ಅಳುವುದರಿಂದ ಮೆದುಳು, ಶರೀರದ ಉಷ್ಣಾಂಶವನ್ನು ಸ್ಥಿರವಾಗಿ ಇರಿಸುತ್ತದೆ.. ಹೀಗಾಗಿ ಸ್ಥಿರವಾಗಿ ಆಲೋಚನೆ ಮಾಡಲು ಸಾಧ್ಯವಾಗುತ್ತದೆ.
ಅತ್ತರೇ ಆಕ್ಸಿಟೋಸಿನ್ (Oxytocin), ಎಂಡಾರ್ಫಿನ್ (Endorphin)ಎಂಬ ಫೀಲ್ ಗುಡ್ ರಾಸಾಯನಿಕಗಳು (Feel good Chemical’s) ಬಿಡುಗಡೆ ಆಗುತ್ತವೆ. ಇವು ಮನುಷ್ಯರ ಮೂಡನ್ನು ಬದಲಿಸುತ್ತವೆ. ನೋವನ್ನು ಮರೆಸಿ ಸಂತೋಷದಿಂದ ಇರುವಂತೆ ಮಾಡುತ್ತದೆ.
ಅಳುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ (Blood Pressure Control )ಇರುತ್ತದೆ. ಇದರಿಂದ ಹೃದಯ ರೋಗ ಕೂಡ ಬರುವುದಿಲ್ಲ.
ಅತ್ತಾಗ ನಮ್ಮಲ್ಲಿನ ನೆಗೆಟೀವ್ ಆಲೋಚನೆಗಳು ದೂರವಾಗುತ್ತವೆ. ಪ್ರಶಾಂತವಾಗಿ ಆಲೋಚನೆ ಮಾಡಲು ಅವಕಾಶ ಮಾಡಿಕೊಡುತ್ತವೆ.
ಕಣ್ಣೀರಿನಲ್ಲಿ ಐಸೋಜಿಮ್ (Eysogim)ಎಂಬ ಎಂಜೈಮ್ ಇರುತ್ತದೆ. ಇದಕ್ಕೆ ಆಂಟಿ ಮೈಕ್ರೋಬಯಲ್ ಲಕ್ಷಣಗಳು ಇರುತ್ತವೆ. ಹೀಗಾಗಿ ಕಣ್ಣಿನೊಳಗೆ ಬ್ಯಾಕ್ಟಿರಿಯಾ ಸೇರಿಕೊಂಡರೇ, ಅದರ ವಿರುದ್ಧ ಐಸೋಜಿಮ್ ಹೋರಾಡಿ ಕಣ್ಣಿಗೆ ಹಾನಿ ಆಗದಂತೆ ನೋಡಿಕೊಳ್ಳುತ್ತದೆ.