ಬಿಹಾರದ ಬೆಗುಸರಾಯ್ ಜಿಲ್ಲಾ ನ್ಯಾಯಾಲಯದ ಚಿತ್ರ ನಿರ್ಮಾಪಕಿ ಹಾಗೂ ನಿರ್ದೇಶಕಿ ಏಕ್ತಾ ಕಪೂರ್ (Ektha Kapoor) ಹಾಗೂ ಆಕೆಯ ತಾಯಿಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಏಕ್ತಾ ಕಪೂರ್ ನಿರ್ಮಾಣ ಮಾಡಿದ್ದ XXX (Season-2) ವೆಬ್ಸೀರಿಸ್ನಲ್ಲಿ ಸೈನಿಕರಿಗೆ ಅವಮಾನ ಮಾಡಲಾಗಿದೆ ಹಾಗೂ ಸೈನಿಕರ ಕುಟುಂಬಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಪ್ರಕರಣದಲ್ಲಿ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಬಗ್ಗೆ 2020ರಲ್ಲಿ ಕುಮಾರ್ ಎನ್ನುವವರು XXX (Season-2) ವೆಬ್ಸೀರಿಸ್ ನಲ್ಲಿ ಸೈನಿಕರಿ ಹೆಂಡತಿಯರಿಗೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎಂದು ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ : ಯು-ಟರ್ನ್ ಚಿತ್ರದ ಹಿಂದಿ ರಿಮೇಕ್ ನಿರ್ಮಾಣ ಮಾಡಲಿರುವ ಏಕ್ತಾ ಕಪೂರ್
ಏಕ್ತಾ ಕಪೂರ್ (Ektha Kapoor) ಅವರ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ನ ಅಲ್ಟ್ ಬಾಲಾಜಿ (ALTBalaji) ಎನ್ನುವ ಒಟಿಟಿ ವೇದಿಕೆಯ ಮೂಲಕ ವೆಬ್ಸೀರಿಸ್ ಬಿಡುಗಡೆ ಮಾಡಿದ್ದರು. ಏಕ್ತಾ ಕಪೂರ್ ಅವರ ತಾಯಿ ಶೋಭಾ ಕಪೂರ್ ಈ ಟೆಲಿಫಿಲ್ಮ್ಸ್ನ ಸಹ ಮಾಲೀಕರಾಗಿದ್ದಾರೆ.
ಈ ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ಮೊದಲ ಬಾರಿಗೆ ಸಮನ್ಸ್ ಜಾರಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೇಳಿತ್ತು. ಆಕ್ಷೇಪಾರ್ಹ ದೃಶ್ಯಗಳನ್ನು ವೆಬ್ಸೀರಿಸ್ನಿಂದ ತೆಗೆದುಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಆದರೆ, ಅವರು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಇದರಿಂದಾಗಿ ನ್ಯಾಯಾಲಯ ಅವರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.