ರಾಂಚಿಯಲ್ಲಿ ಹನುಮಾನ್ ವಿಗ್ರಹ ಧ್ವಂಸ- ಪರಿಸ್ಥಿತಿ ಉದ್ವಿಗ್ನ

Lord Hanuman Idol

ಜಾರ್ಖಂಡ್‌ನ ರಾಂಚಿಯಲ್ಲಿರುವ ದೇವಾಲಯದಲ್ಲಿ ಕೆಲ ಸಮಾಜ ವಿರೋಧಿ ಶಕ್ತಿಗಳು ಹನುಮಾನ್ ವಿಗ್ರಹ (Lord Hanuman Idol) ವನ್ನು ಧ್ವಂಸಗೊಳಿಸಿದ್ದಾರೆ.

ರಾಂಚಿಯ ಮುಖ್ಯರಸ್ತೆಯಲ್ಲಿರುವ ದೇವಾಲಯದಲ್ಲಿ ಬೃಹತ್ ಹನುಮನ ವಿಗ್ರಹವನ್ನು ಇರಿಸಲಾಗಿತ್ತು. ಇದೀಗ ಕೀಡಿಗೇಡಿಗಳಿಂದ ಕೃತ್ಯ ನಡೆದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಹನುಮಾನ್ ವಿಗ್ರಹದ ಕೈ ಕಾಲು, ತಲೆ ಹಾಗೂ ಮುಖದ ಭಾಗಕ್ಕೆ ಹಾನಿ ಮಾಡಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿ ಓರ್ವ ಆರೋಪಿಯನ್ನೂ ಬಂಧಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣದಲ್ಲಿಡಲು ದೇಗುಲದ ಸುತ್ತ ಹಾಗೂ ರಾಂಚಿ ನಗರದಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Goddess Durga Idol : ದುರ್ಗಾ ದೇವಿ ವಿಗ್ರಹ ವಿರೂಪ; ಇಬ್ಬರು ಮಹಿಳೆಯರ ಬಂಧನ