ಭಾನುವಾರ ಭಾರತ-ಪಾಕಿಸ್ತಾನ ನಡುವೆ T-20 ವಿಶ್ವಕಪ್​ ಪಂದ್ಯ – ಜಾಹೀರಾತು ದರ ಎಷ್ಟಿದೆ ಗೊತ್ತಾ..?

India Pakistan Match
India Pakistan Match
ಇಂದಿನಿಂದ ಟಿ-ಟ್ವೆಂಟಿ ವಿಶ್ವಕಪ್ (T-20 World Cup)​​ ಆರಂಭ. ಆಸ್ಟ್ರೇಲಿಯಾದಲ್ಲಿ ಆರಂಭ ಆಗಲಿರುವ ವಿಶ್ವಕಪ್​​ನ ಮೊದಲ ಪಂದ್ಯದಲ್ಲಿ ಇವತ್ತು ವೆಸ್ಟ್​ಇಂಡೀಸ್​ ಮತ್ತು ಐರ್ಲೆಂಡ್​ ಮುಖಾಮುಖಿ ಆಗಲಿವೆ.
ಭಾನುವಾರ ಭಾರತ ಮತ್ತು ಪಾಕಿಸ್ತಾನದ (India – Pakistan Match) ನಡುವೆ ನಡೆಯಲಿರುವ ವಿಶ್ವಕಪ್​ನ ಐದನೇ ಪಂದ್ಯದ ಮೇಲೆ ಇಡೀ ವಿಶ್ವ ಕ್ರಿಕೆಟ್​ ಪ್ರಿಯರ ಕಣ್ಣು ನೆಟ್ಟಿದೆ. ಹೀಗಾಗಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಪ್ರಸಾರದ ವೇಳೆ ಪ್ರಸಾರ ಆಗುವ ಜಾಹೀರಾತಿನ ಮೊತ್ತವೂ ಹೆಚ್ಚಳ ಆಗಿದೆ.
ಜಾಹೀರಾತು ದರ ಹೇಗಿದೆ..? (Ads Rate)
2021ರಲ್ಲಿ ಟಿ-ಟ್ವೆಂಟಿ ವಿಶ್ವಕಪ್​ ಪ್ರಸಾರದ ವೇಳೆ ಟಿವಿಯಲ್ಲಿ 10 ಸೆಕೆಂಡ್​ಗಳ ಜಾಹೀರಾತಿಗೆ ವಿಧಿಸಲಾಗುತ್ತಿದ್ದ ಮೊತ್ತ 8 ರಿಂದ 9 ಲಕ್ಷ ರೂಪಾಯಿ. ಈಗ ಈ ಮೊತ್ತ 10 ರಿಂದ 12 ಲಕ್ಷ ರೂಪಾಯಿಗೆ ಹೆಚ್ಚಳ ಆಗಿದೆ.
2021ರಲ್ಲಿ ಟಿ-ಟ್ವೆಂಟಿ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಪ್ರಸಾರದ ವೇಳೆ 10 ಸೆಕೆಂಡ್​ಗಳ ಜಾಹೀರಾತಿಗೆ ವಿಧಿಸಲಾಗುತ್ತಿದ್ದ ದರ ಬೇರೆಯೇ ಇರುತ್ತಿತ್ತು. ಅಂದರೆ 14 ರಿಂದ 15 ಲಕ್ಷ ರೂಪಾಯಿ.
ಆದರೆ ಈ ಬಾರಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಪ್ರಸಾರದ ವೇಳೆ 10 ಸೆಕೆಂಡ್​ಗಳ ಜಾಹೀರಾತಿಗೆ ವಿಧಿಸಲಾಗುತ್ತಿರುವ ದರ 16 ರಿಂದ 18 ಲಕ್ಷ ರೂಪಾಯಿಗೆ ಹೆಚ್ಚಳ ಆಗಿದೆ.
ಡಿಜಿಟಲ್​ ಜಾಹೀರಾತು ದರವೂ ಹೆಚ್ಚಳ:
ಡಿಜಿಟಲ್​​ನಲ್ಲೂ ಭಾರತದ ಪಂದ್ಯ ಅದರಲ್ಲೂ, ಭಾರತ-ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಜಾಹೀರಾತು ಮೊತ್ತ ದುಬಾರಿ. ಈ ಬಾರಿ ಟಿ-ಟ್ವೆಂಟಿ ವಿಶ್ವಕಪ್​ನಲ್ಲಿ ಪ್ರತಿ 1 ಸಾವಿರ ಇಂಪ್ರೆಷನ್ಸ್​​ಗೆ ಸರಣಿಯಲ್ಲೇ 250ರಿಂದ 300 ರೂಪಾಯಿ ದರ ವಿಧಿಸಲಾಗಿದೆ.
ಆದರೆ ಭಾರತ ಆಡುವ ಪಂದ್ಯಗಳಿಗೆ ಪ್ರತಿ ಪಂದ್ಯಕ್ಕೂ 1 ಸಾವಿರ ಇಂಪ್ರೆಷನ್ಸ್​​ಗೆ 1 ಸಾವಿರ ರೂ.ನಿಂದ 1,200 ರೂಪಾಯಿವರೆಗೆ ಜಾಹೀರಾತು ಶುಲ್ಕ ಇದೆ. ಅದರಲ್ಲೂ ಭಾರತ-ಪಾಕಿಸ್ತಾನದ ನಡುವಿನ ಪಂದ್ಯಕ್ಕೆ 2 ಸಾವಿರ ರೂ.ಗಳಿಂದ 2,400 ರೂ.ಗಳವರೆಗೆ ಶುಲ್ಕ ಇದೆ.