ಸಾವಿನಲ್ಲೂ ಒಂದಾದ ಜೋಡಿ : ಪತ್ನಿ ಸಾವು ಬೆನ್ನಲ್ಲೇ ಪತಿ ಆತ್ಮಹತ್ಯೆ

ಪತ್ನಿ ಸಾವಿನ ನಂತರ ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನಲ್ಲೂ ಒಂದಾದ ಜೋಡಿಯ ಮನಕಲುಕುವ ಘಟನೆ ವರದಿಯಾಗಿದೆ.

ಬೆಳಗಾವಿಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದಾಶಿವ ರಾಮಪ್ಪ ಕಾಂಬಳೆ (26) ಮೃತ ದುರ್ದೈವಿ.

ಸದಾಶಿವ ರಾಮಪ್ಪ ಕಾಂಬಳೆಯವರ ಪತ್ನಿ ರೂಪಾ ಸದಾಶಿವ ಕಾಂಬಳೆ (21) ಅನಾರೋಗ್ಯದಿಂದ ಕಳೆದ ಎರಡು ದಿನದ ಹಿಂದೆ ಸಾವನ್ನಪ್ಪಿದ್ದರು. ಪತ್ನಿ ಅಗಲಿಕೆ ಬಳಿಕ ಮನನೊಂದ ಸದಾಶಿವ ಮನೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದಾರೆ. ಕೂಡಲೇ ಕುಟುಂಬಸ್ಥರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸದಾಶಿವ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಐಗಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here