ಕಾಂಗ್ರೆಸ್​​ ನಾಯಕ ಮುನಿಯಪ್ಪ ಬಿಜೆಪಿ ಸೇರ್ಪಡೆ ಸಾಧ್ಯತೆ

KH Muniyappa

ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಹೆಚ್​.ಮುನಿಯಪ್ಪ (KH Muniyappa) ಕಾಂಗ್ರೆಸ್​​ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆದಿದೆ.

ಈ ಚರ್ಚೆಗೆ ಇಂಬು ನೀಡುವಂತೆ ಇಂದು ಕೆ.ಹೆಚ್​.ಮುನಿಯಪ್ಪನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ರೇಸ್​ ಕೋರ್ಸ್​​ ನಿವಾಸದಲ್ಲಿ  ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿಯಾದ ಕೆಲವೇ ಹೊತ್ತಿನಲ್ಲಿ, ಆರೋಗ್ಯ ಸಚಿವ ಕೆ.ಸುಧಾಕರ್​​ರನ್ನು ಅವರ ಮನೆಯಲ್ಲಿ ಭೇಟಿಯಾಗಿ ಒಂದು ಗಂಟೆಗಳ ಕಾಲ ಚರ್ಚಿಸಿದ್ದಾರೆ. ಮುನಿಯಪ್ಪನವರ ಈ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಶಾಸಕ ರಮೇಶ್ ಕುಮಾರ್ ಶಕುನಿ ಇದ್ದಂತೆ : ಕೆಎಚ್ ಮುನಿಯಪ್ಪ

ಕಾಂಗ್ರೆಸ್​​​ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಕೆ.ಹೆಚ್​.ಮುನಿಯಪ್ಪ (KH Muniyappa) ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಎಂ.ಸಿ.ಸುಧಾಕರ್ ಮತ್ತು ಕೊತ್ತನೂರು ಮಂಜುನಾಥ್​ರನ್ನು ಕಾಂಗ್ರೆಸ್​​ ಪಕ್ಷಕ್ಕೆ ಸೇರಿಸಿಕೊಂಡ ಕಾರಣ ತೀವ್ರ ಅಸಮಾಧಾನಗೊಂಡಿದ್ದರು.

ಕೋಲಾರ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಚಿವ ಕೆ.ಆರ್​​.ರಮೇಶ್​​ ಕುಮಾರ್​ ಅವರ ಜೊತೆ ಇತ್ತೀಚಿನವರೆಗೂ ತೀವ್ರ ಹಣಾಹಣಿ ನಡೆದಿತ್ತು. ಈ ವಿಷಯದಲ್ಲಿ ಸಿದ್ದರಾಮಯ್ಯನವರ ಮೇಲೆಯೂ ಮುನಿಯಪ್ಪ ಬೇಸರಗೊಂಡಿದ್ದರು ಎನ್ನಲಾಗಿದೆ.

ಇಂದು ಮುನಿಯಪ್ಪನವರು ಸ್ವಾಮೀಜಿಯೊಬ್ಬರ ಜೊತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಆ ಮೂಲಕ ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ಇದನ್ನೂ ಓದಿ : ಅತ್ಯಾಚಾರ ತಡೆಯಲು ಆಗದಿದ್ದರೆ, ಮಲಗಿ ಆನಂದಿಸಿ: ಮಾಜಿ ಸ್ಪೀಕರ್ ರಮೇಶ್​ಕುಮಾರ್​ ಮಾತಿಗೆ ವ್ಯಾಪಕ ಟೀಕೆ

ಮುನಿಯಪ್ಪರನ್ನು ಜೆಡಿಎಸ್​​ ನಾಯಕರೂ ತಮ್ಮ ಪಕ್ಷಕ್ಕೆ ಬರುವಂತೆ ಈ ಹಿಂದೆ ಆಹ್ವಾನ ನೀಡಿದ್ದರು.

LEAVE A REPLY

Please enter your comment!
Please enter your name here