ಹಾರ್ಮೋನ್‌ಗಳ ಅಸಮತೋಲನ, ರೋಗನಿರೋಧಕ ಶಕ್ತಿ ಇಲ್ಲದ ಕಾರಣ ಮುಖ, ಕತ್ತು, ಕೈ, ಕಾಲುಗಳ ಮೇಲೆ ನರಹುಲಿ (wart) ಏರ್ಪಡುತ್ತವೆ.. ಇವುಗಳನ್ನು ತೊಲಗಿಸಲು ಆಯುರ್ವೇದದಲ್ಲಿ ಹಲವು ಮದ್ದು ಇದೆ.
ಮದ್ದು1
ಆಲಿವ್ ಆಯಿಲ್ನಲ್ಲಿ ಬೆಳ್ಳುಳ್ಳಿಯನ್ನು ಬಿಸಿ ಮಾಡಿ, ಅದನ್ನು ಅಡಿಕೆಲೆಗೆ ಬಳಸುವ ಸುಣ್ಣದೊಂದಿಗೆ ಸೇರಿಸಿ ನರಹುಲಿ ಮೇಲೆ ಹಾಕಿದಲ್ಲಿ, ಅದು ಉದರುತ್ತದೆ.
ಮದ್ದು2
ಬೇಕಿಂಗ್ ಸೋಡಾವನ್ನು ಔಡಲ ಎಣ್ಣೆ ಅಥ್ವಾ ಹರಳೆಣ್ಣೆಯಲ್ಲಿ ಬೆರೆಸಿ ಅದನ್ನು ಎರಡ್ಮೂರು ದಿನ ನರಹುಲಿಗೆ ಹಚ್ಚಬೇಕು.. ಹೀಗೆ ಮಾಡಿದಲ್ಲಿ ಅದು ಮೆಲ್ಲಗೆ ಕರಗುತ್ತದೆ.
ಮದ್ದು3
ಅಲೋವೆರಾದ ಅಂಟಿನಲ್ಲಿ ಮೆಲಿಕ್ ಆಸಿಡ್ ಇರುತ್ತದೆ.. ಇದನ್ನು ಹಚ್ಚಿದರೂ ಫಲಿತಾಂಶ ಸಿಗುತ್ತದೆ.
ಮದ್ದು4
ಬಾಳೆಹಣ್ಣಿನ ಸಿಪ್ಪೆಯಲ್ಲಿ ಎಂಜೈಮ್ ಇರುತ್ತದೆ.. ಬಾಳೆಹಣ್ಣು ಸಿಪ್ಪೆಯಿಂದ ನರಹುಲಿ ಮೇಲೆ ಉಜ್ಜಿದರೇ ಅದು ಉದುರಿಹೋಗುತ್ತದೆ. ಆದರೆ, ಈ ಪದ್ದತಿಯಲ್ಲಿ ಫಲಿತಾಂಶ ತಡವಾಗಿ ಬರುತ್ತದೆ.
ಮದ್ದು5
ಆಪಲ್ ಸಿಡರ್, ವೆನಿಗರ್‌ನಿಂದ ಕೂಡ ನರಹುಲಿ ಕಡಿಮೆ ಆಗುತ್ತವೆ. ಈ ಎರಡನ್ನು ಸೇರಿಸಿ ಹತ್ತಿಯಿಂದ ನರಹುಲಿ ಮೇಲೆ ಉಜ್ಜಬೇಕು..
ಮದ್ದು6
ಈರುಳ್ಳಿಯನ್ನು ಮೆತ್ತಗೆ ರುಬ್ಬಿ ಅದರ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಬೇಕು. ಅದನ್ನು ಹತ್ತಿಯಿಂದ ಅದ್ದಿಕೊಂಡು ನರಹುಲಿ ಇರುವ ಕಡೆ ಹಚ್ಚಬೇಕು. ನಂತರ ಅದರ ಮೇಲೆ ಪ್ಲಾಸ್ಟರ್ ಅಂಟಿಸಬೇಕು.. ಹೀಗೆ ಒಂದು ವಾರದಲ್ಲಿ ಮಾಡಿದಲ್ಲಿ ನರಹುಲಿ ಮಾಯವಾಗುತ್ತದೆ.
ಮದ್ದು7
ಬೆಳ್ಳುಳ್ಳಿಯನ್ನು ಮೆತ್ತಗೆ ರುಬ್ಬಿಕೊಳ್ಳಬೇಕು.. ಅದನ್ನು ನರಹುಲಿ ಮೇಲೆ ಇಟ್ಟು ಪ್ಲಾಸ್ಟರ್ ಹಾಕಬೇಕು.. ಹೀಗೆ ದಿನಕ್ಕೆ ಎರಡು ಬಾರಿ ಮಾಡಿದಲ್ಲಿ ಒಂದು ವಾರದಲ್ಲಿ ನರಹುಲಿ ಮಾಯವಾಗುತ್ತದೆ.
ಮದ್ದು8
ವೀಳ್ಯದೆಲೆಯ ತೊಟ್ಟಿನಿಂದ ನರಹುಲಿ ಮೇಲೆ ಉಜ್ಜಬೇಕು.. ಹೀಗೆ ದಿನಾ ಮಾಡಿದಲ್ಲಿ ನರಹುಲಿ ಬೇಗನೆ ಉದುರಿಹೋಗುತ್ತದೆ