* ನೀವು ಹೆಚ್ಚಾಗಿ ನೋಡದ ಓಟಿಟಿ(OOT), ಅನಗತ್ಯ ಆಪ್‌ಗಳ (Unnecessary application) ಸದಸ್ಯತ್ವವನ್ನು ವಾಪಸ್ ಪಡೆಯಿರಿ
* ವಿದ್ಯುತ್(Power Bill), ನೀರು(Water bill), ಮೊಬೈಲ್ ಬಿಲ್ (Mobile bill)ಸೇರಿ ಎಲ್ಲಾ ರೀತಿಯ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ಗಡುವು ಮೀರಿದಲ್ಲಿ ದಂಡದಲ್ಲಿ ರೂಪದಲ್ಲಿ ಹೆಚ್ಚುವರಿ ಶುಲ್ಕದ ಭಾರ ಬೀಳುತ್ತದೆ.
* ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ವ್ಯವಹರಿಸಿ.. (online Transaction) ಎಟಿಎಂನಿಂದ ಪದೇ ಪದೇ ಹಣ ತೆಗೆಯಬೇಡಿ. (ATM) ಉಚಿತ ಟ್ರಾನ್ಸಾಕ್ಷನ್‌ಗಳು (Free transaction) ಮುಗಿದ ಕೂಡಲೇ ಎಟಿಎಂ ಬಳಸಿದ ಪ್ರತಿಯೊಂದು ಬಾರಿಯೂ ಬ್ಯಾಂಕ್‌ಗಳು ಹೆಚ್ಚುವರಿ ಶುಲ್ಕ ವಿಧಿಸುತ್ತವೆ.
* ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಗಡುವಿನೊಳಗೆ ಪಾವತಿಸಿ (Credit cards Bill payments). ಇಲ್ಲ ಎಂದರೇ ದೊಡ್ಡ ಮೊತ್ತದಲ್ಲಿ ಬಡ್ಡಿ ಕಟ್ಟಬೇಕಾಗುತ್ತದೆ.
* ನಾಲ್ಕೈದು ವಿಮೆ ಮಾಡಿಸಿ ಅದರ ಪ್ರೀಮಿಯಂ ಕಟ್ಟುತ್ತಾ ಹಣವನ್ನು ವ್ಯರ್ಥ ಮಾಡಬೇಡಿ.. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ತಕ್ಕಂತೆ ಒಂದು ಜೀವ ವಿಮೆ (Life Insurance)ಮಾಡಿಸಿ.. ಒಂದು ಆರೋಗ್ಯ ವಿಮೆ (Health Insurance) ಮಾಡಿಸಿದರೇ ಸಾಕು.
* ಮನೆಯಲ್ಲಿ ಎಲ್ಲರ ಬಳಿಯೂ ಮೊಬೈಲ್ ಇರುತ್ತವೆ. ಅದಕ್ಕೆ ರಿಚಾರ್ಜ್ (Mobile Recharge) ಅಂತಾ ದೊಡ್ಡ ಮೊತ್ತವೇ ಖರ್ಚು ಆಗುತ್ತದೆ. ಹೀಗಾಗಿ.. ಡಾಟಾ/ಕಾಲ್ಸ್ (Data, Calls)ಬಳಕೆಗೆ ತಕ್ಕಂತೆ ರೀಚಾರ್ಜ್ ಮಾಡಿಕೊಳ್ಳಿ.
* ಪದೇ ಪದೇ ಕುಟುಂಬ ಸದಸ್ಯರೊಂದಿಗೆ ಮಾಲ್, ರೆಸ್ಟೋರೆಂಟ್‌ಗೆ (Mall, Restaurant)ಹೋಗುವುದು ಕಡಿಮೆ ಮಾಡಿಕೊಳ್ಳಿ. ತಿಂಗಳಿಗೊಮ್ಮೆ ಹೋದರೇ ಪರವಾಗಿಲ್ಲ. ಆದರೆ, ವೀಕೆಂಡ್, ಹಾಲಿಡೇಸ್ (Weekend, holidays)ಅಂತಾ ಪ್ರತಿವಾರ ಹೊರಗೆ ತಿರುಗುವುದರಿಂದ ಹಣ ವ್ಯರ್ಥ ಆಗಲಿದೆ.
* ಈ ಕಾಲದಲ್ಲಿ ವೈಯಕ್ತಿಕವಾಗಿ ವಾಹನ ಹೊಂದುವುದು ಅಗತ್ಯ. ಆದರೆ, ಕ್ರೇಜ್, ಪ್ರತಿಷ್ಠೆ ಅಂತಾ ಲಕ್ಷುರಿ ವಾಹನ (Luxury vehicles)ಕೊಳ್ಳುವ ಸಾಹಸಕ್ಕೆ ಮುಂದಾಗಬೇಡಿ. ನಿಮ್ಮ ಬಜೆಟ್‌ನಲ್ಲಿಯೇ ಒಳ್ಳೆಯ ವಾಹನ ಖರೀದಿಸಿ.
* ಮಾರ್ಕೆಟ್‌ಗೆ ಬರುವ ಪ್ರತಿ ಮೊಬೈಲ್, ಗ್ಯಾಡ್ಜೆಟ್ (Mobile, Gadgets)ನಿಮ್ಮನ್ನು ಆಕರ್ಷಿಸುತ್ತದೆ. ಇಷ್ಟವಾಯ್ತು ಅಂತಾ ಹೇಳಿ ಎಲ್ಲವನ್ನು ಖರೀದಿಸಲು ಹೋಗಬೇಡಿ. ನಿಮ್ಮ ಅಗತ್ಯವಾದ ಡಿವೈಸ್ ಮಾತ್ರ ಖರೀದಿ ಮಾಡಿ.
* ಸೂಪರ್ ಮಾರ್ಕೆಟ್‌ಗೆ (Super Market)ತೆರಳಿದಾಗ ಕಣ್ಣಿಗೆ ಕಾಣಿಸುವ ಪ್ರತಿಯೊಂದು ವಸ್ತುವನ್ನು ಖರೀದಿಸುವ ಮನಸ್ಸಾಗುತ್ತದೆ. ಅದಕ್ಕಾಗಿಯೇ, ಮೊದಲೇ ಖರೀದಿ ಮಾಡಬೇಕಾದ ವಸ್ತುಗಳನ್ನು ಪಟ್ಟಿ ಮಾಡಿಕೊಳ್ಳಿ. ಮೊದಲೇ ನಿರ್ಧರಿಸಿದ ವಸ್ತುಗಳನ್ನು ಮಾತ್ರ ಖರೀದಿಸಿ.