ಮಧುಮೇಹ (Diabetes)ಎನ್ನುವುದು ದೀರ್ಘಕಾಲಿಕ ರೋಗ. ಇದನ್ನು ನಿಯಂತ್ರಣದಲ್ಲಿ (Control) ಇಟ್ಟುಕೊಳ್ಳದಿದ್ದರೇ ತೀವ್ರ ಅನಾರೋಗ್ಯ ಸಮಸ್ಯೆಗಳು (Health Issue)ಎದುರಾಗುವ ಸಂಭವ ಇರುತ್ತದೆ. ರಕ್ತದಲ್ಲಿ ಸಕ್ಕರೆ (Blood sugar)ಮಟ್ಟವನ್ನು ನಿಯಂತ್ರಿಸಲು ಮಧುಮೇಹಿಗಳು ವಿವಿಧ ಔಷಧಿಗಳನ್ನು ಬಳಸುತ್ತಿರುತ್ತಾರೆ. ಆದರೆ, ಆಹಾರ,(Food) ಜೀವನಶೈಲಿಯಲ್ಲಿ (Life Style)ಬದಲಾವಣೆ ಮಾಡಿಕೊಂಡಲ್ಲಿ ಸಹಜವಾಗಿಯೇ ಮಧುಮೇಹವನ್ನು ನಿಯಂತ್ರಿಸಬಹುದು. ಅದು ಹೇಗೆ ಎಂದರೇ..
* ತೆಗೆದುಕೊಳ್ಳುವ ಆಹಾರದಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಸ್.. ( carbohydrates) ಹೆಚ್ಚು ಪ್ರೊಟೀನ್ (Protein) ಇರುವಂತೆ ನೋಡಿಕೊಳ್ಳಿ
* ಕಾಬೋಹೈಡ್ರೇಟ್ಸ್ ಕಡಿಮೆ ತೆಗೆದುಕೊಂಡಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ (Sugar Control)ಬರುತ್ತದೆ
* ಒಮ್ಮೆಲೆ ಹೆಚ್ಚು ಹೆಚ್ಚು ಆಹಾರ ತೆಗೆದುಕೊಳ್ಳುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.
* ಹೀಗಾಗಿ, ಒಂದೇ ಬಾರಿ ಅಲ್ಲದೇ ಆಗಾಗ ಸ್ವಲ್ಪ ಮೊತ್ತದಲ್ಲಿ ಆಹಾರೆ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ
* ತಿನ್ನುವ ಆಹಾರದಲ್ಲಿ ಫೈಬರ್ (Fiber) ಹೆಚ್ಚಿರುವಂತೆ ನೋಡಿಕೊಳ್ಳಿ. ಇದು ಕಾರ್ಬೋಹೈಡ್ರೇಟ್ಗಳನ್ನು ಸಕ್ಕರೆಯಾಗಿ ಮಾರ್ಪಾಡು ಮಾಡುವುದನ್ನು ನಿಧಾನ ಮಾಡುತ್ತದೆ.
* ಚನ್ನಾಗಿ ನಿದ್ದೆ (Sleeping) ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ. ಅದಕ್ಕಾಗಿಯೇ ಕನಿಷ್ಠ 6-8 ಗಂಟೆ ನಿದ್ದೆ ಮಾಡಬೇಕು
* ಶರೀರ ಆರೋಗ್ಯವಾಗಿ (Body Helath)ಇರಬೇಕು ಎಂದರೇ ಆಗಾಗ ನೀರು(Water) ಕುಡಿಯಬೇಕು, ಮುಖ್ಯವಾಗಿ ಮಧುಮೇಹಿಗಳು ಶರೀರವನ್ನು ಡಿಹೈಡ್ರೇಟ್ (Dehydration) ಆಗದಂತೆ ನೋಡಿಕೊಳ್ಳಲು ಆಗಾಗ ನೀರು ಕುಡಿಯಲೇಬೇಕು
* ಸಕ್ಕರೆಯಾಗಿ ಬದಲಾದ ಕಾರ್ಬೋಹೈಡ್ರೇಟ್ಸ್ನಿಂದ ದೇಹಕ್ಕೆ ಶಕ್ತಿ ಬರುತ್ತದೆ.
* ನಿತ್ಯ ವ್ಯಾಯಾಮ (Exercise) ಮಾಡುವುದರಿಂದ ಅಧಿಕ ಸಕ್ಕರೆ ಅಂಶವನ್ನು ಸ್ನಾಯುಗಳು ಬಳಸಿಕೊಳ್ಳುತ್ತವೆ. ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.