Dishes: ಪಾತ್ರೆ ಬೆಳ್ಳಗೆ ಹೊಳೆಯಬೇಕು ಎಂದರೇ…

ಪ್ರತಿ ಮನೆಯಲ್ಲಿ ಸ್ಟೀಲ್, ಅಲ್ಯೂಮಿನಿಯಮ್ ಪಾತ್ರೆಗಳಿರುತ್ತದೆ. ಅವು ಥಳಥಳ ಹೊಳೆಯಬೇಕು ಎಂದರೇ ಹೀಗೆ ಮಾಡಿ..

* ಅಡುಗೆ ಮಾಡುವಾಗ ಕೆಲವೊಮ್ಮೆ ಪಾತ್ರೆಗಳ ತಳ ಅಂಟುತ್ತದೆ.. ನೀರಿನಲ್ಲಿ ಎರಡು ಹನಿ ನಿಂಬೆ ರಸವನ್ನು ಹಾಕಿ ಕೆಲವು ಕ್ಷಣ ಬಿಟ್ಟು ಪಾತ್ರೆಗಳನ್ನು ಉಜ್ಜಿದರೆ ಆ ಕಲೆಗಳು ಮಾಯವಾಗುತ್ತದೆ.

* ಪಾತ್ರೆಗಳಿಗೆ ಎಣ್ಣೆ ಜಿಡ್ಡು ಆದರೆ ಬೇಗ ಹೋಗಲ್ಲ.. ನೀರಿನಲ್ಲಿ ಸ್ವಲ್ಪ ಡಿಟರ್ಜೆಂಟ್ ಪೌಡರ್ ಹಾಕಿ ತೊಳೆದು ನೋಡಿ.. ಜಿಡ್ಡು ಕ್ಷಣದಲ್ಲಿ ಮಾಯವಾಗುತ್ತದೆ.

* ಪಿಂಗಾಣಿ ಪಾತ್ರೆಗಳು ಹೊಳೆಯಬೇಕು ಎಂದರೆ ಮೊದಲು ಬೂದಿಯಿಂದ ಉಜ್ಜಿ. ನಂತರ ಸೋಪ್ ನೀರಿನಲ್ಲಿ ತೊಳೆದಲ್ಲಿ ಅವು ಹೊಸದರಂತೆ ಕಾಣುತ್ತದೆ.

* ಬೆಳ್ಳಿ ವಸ್ತುಗಳ ಹೊಳಪು ಕಡಿಮೆ ಆಗಬಾರದು ಎಂದರೇ ಅವುಗಳನ್ನು ಇಡುವ ಬ್ಯಾಗ್/ಬಾಕ್ಸ್‌ನಲ್ಲಿ ಕರ್ಪೂರ ಹಾಕಿ ನೋಡಿ.. ಹೊಳಪು ಕಡಿಮೆ ಆಗಲ್ಲ.

* ಸ್ಟೀಲ್ ಪಾತ್ರೆ ಥಳಥಳ ಹೊಳೆಯಬೇಕು ಎಂದರೇ ಬೇಕಿಂಗ್ ಸೋಡಾವನ್ನು.. ಹಲ್ಲುಜ್ಜುವ ಪೇಸ್ಟ್ ಅನ್ನು ಸ್ವಲ್ಪ ನೀರಲ್ಲಿ ಹಾಕಿ ತೊಳೆಯಬೇಕು

* ಅಡುಗೆ ಮಾಡುವಾಗ ಪಾತ್ರೆಗಳಿಗೆ ಮಸಿ ಆಗಬಾರದು ಎಂದರೇ, ಪಾತ್ರೆಯ ತಳಭಾಗದಲ್ಲಿ ಸೋಪನ್ನು ಹಚ್ಚಬೇಕು

* ಬಳಸಿದ ಟೀ ಪುಡಿಯಿಂದ ಸ್ಟೀಲ್ ಪಾತ್ರೆಗಳನ್ನು ಉಜ್ಜಿದಲ್ಲಿ ಹೊಳಪು ಬರುತ್ತದೆ.

* ಟೀ, ಕಾಫಿಯ ಕಪ್‌ಗಳನ್ನು ಉಪ್ಪಿನಿಂದ ತೊಳೆದಲ್ಲಿ ಅ ಕಪ್​ಗಳು ಹೊಸದರಂತೆ ಕಾಣುತ್ತವೆ.

* ಹಿತ್ತಾಳೆ, ತಾಮ್ರದ ವಸ್ತುಗಳನ್ನು ಹುಣಸೆಹಣ್ಣು, ಉಪ್ಪು ಮಿಶ್ರಣದಿಂದ ತೊಳೆದಲ್ಲಿ ಹೊಸದರಂತೆ ಕಾಣುತ್ತವೆ.

LEAVE A REPLY

Please enter your comment!
Please enter your name here