ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ. ಬಿಜೆಪಿ ವಿರುದ್ಧ ಹೀನಾಯ ಸೋಲನುಭವಿಸಿದ ಕಾಂಗ್ರೆಸ್ ಒಟ್ಟು 199 ಸ್ಥಾನಗಳಲ್ಲಿ ಬಹುಮತ ಪಡೆಯಲು ವಿಫಲವಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ 12 ಮಂತ್ರಿಗಳು ಮಣ್ಣು ಮುಕ್ಕಿದ್ದಾರೆ.
ಜನಪ್ರಿಯ ಸಚಿವರಾದ ಗೋವಿಂದ್ ರಾಮ್ ಮೇಘವಾಲಾ,ಭವರ್ ಸಿಂಗ್ , ರಮೇಶ್ ಮೀಣಾ, ಪ್ರಸಾದಿಲಾಲ್ ಮೀಣಾ, ವಿಶ್ವೇಂದ್ರ ಸಿಂಹ ಸೇರಿದಂತೆ, ಗೆಹ್ಲೋಟ್ ಸರ್ಕಾರದ 12 ಮಂದಿ ಸಚಿವರು ಸೋತು ಸುಣ್ಣವಾಗಿದ್ದಾರೆ.
ಹೆಚ್ಚಾದ ಮಹಿಳೆಯರ ಮೇಲಿನ ದೌರ್ಜನ್ಯಗಳು, ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕಾಂಗ್ರೆಸ್ ನ ಆಂತರಿಕ ಕಲಹಗಳು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿತ್ತು. ಆದ್ರೆ ಬಿಜೆಪಿಗೆ ಈ ಎಲ್ಲಾ ಅಂಶಗಳು ವರದಾನದಂತೆ ಪರಿಣಮಿಸಿ, ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಿದೆ.