ಹಾಸನ ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ.
ಹಾಸನ ಕ್ಷೇತ್ರದಿಂದ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ನಿರ್ಧಾರದಲ್ಲಿ ಬದಲಾವಣೆ ಆಗಲ್ಲ ಎಂದು ಕುಮಾರಸ್ವಾಮಿ ನೇರವಾಗಿ ಹೇಳಿದ್ದಾರೆ.
ಈ ಮೂಲಕ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಅವರಿಗೆ ಅಥವಾ ತಮಗೆ ಟಿಕೆಟ್ ಕೊಡುವಂತೆ ಹೆಚ್ ಡಿ ರೇವಣ್ಣ ಅವರ ಪಟ್ಟು ಬಿಗಿಗೊಳಿಸಿ ಕ್ಷೇತ್ರದಲ್ಲಿ ಓಡಾಟ ತೀವ್ರಗೊಳಿಸಿರುವ ಹೊತ್ತಲ್ಲಿ ಕುಮಾರಸ್ವಾಮಿ ಅವರ ಇವತ್ತಿನ ಹೇಳಿಕೆ ಇನ್ನಷ್ಟು ಮಹತ್ವ ಪಡೆದಿದೆ.
ನಾಳೆ ಕರೆದಿರುವ ಸಭೆ ರದ್ದಾಗಿರಬಹುದು, ಆದರೆ ನನ್ನ ನಿಲುವು ನಿರ್ಧಾರ ಬದಲಾಗಲ್ಲ. ನನ್ನ ಕಾರ್ಯಕರ್ತರಿಗೆ ಗೌರವ ಕೊಡಿಸುವ ನನ್ನ ನಿರ್ಧಾರ ಬದಲಾಗಲ್ಲ. 2 ವರ್ಷದಿಂದ ಬಿಜೆಪಿ ದುರಂಹಕಾರದ ಅಭ್ಯರ್ಥಿಯ ಎದುರು ಕಾರ್ಯಕರ್ತನನ್ನು ನಿಲ್ಲಿಸುವ ಸಾಮರ್ಥ್ಯ ಪಕ್ಷಕ್ಕಿದೆ ಎನ್ನುವುದನ್ನು ತೋರಿಸಿಕೊಡ್ಬೇಕಿದೆ.
ನಮ್ಮ ಪಕ್ಷದಲ್ಲಿ ದೇವರಾಜ್ ಎಂಬುವವರು ಇದ್ದಾರೆ. ನಾಳೆಯ ಸಭೆಯನ್ನು ರಾಜ್ಯಾಧ್ಯಕ್ಷರು ಅಥವಾ ರಾಷ್ಟ್ರೀಯ ಅಧ್ಯಕ್ಷರು ಕ್ಯಾನ್ಸಲ್ರ ಮಾಡಿಸಿದ್ದಾರೋ ಗೊತ್ತಿಲ್ಲ.
ನಾನು ಇಷ್ಟು ದಿನ ಹಾಸನ ಕ್ಷೇತ್ರದ ಬಗ್ಗೆ ಎಂಟ್ರಿ ಆಗಿರಲಿಲ್ಲ. ಈಗ ಆಗಿದ್ದೇನೆ. ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿಲುವು ಬದಲಾಗಲ್ಲ. ಯಾರು ಗೊಂದಲ ಮೂಡಿಸ್ತಿದ್ದಾರೋ ಅವರನ್ನೇ ಕೇಳಿ. ಸಭೆ ಮುಂದು ಹಾಕಿದ್ದು ಪಕ್ಷದ ಯಾರೋ ಇರಬಹುದು.
18-20 ವರ್ಷದಿಂದ ನನೃಗೆ ಮನಸ್ಸಿಲ್ಲ ಅಂದ್ರುನೂ ಕೆಲವೊಂದು ತಪ್ಪು ತೀರ್ಮಾನವಾಗಿದೆ. ಈಗ ಆ ತಪ್ಪು ಆಗಲು ಬಿಡಲ್ಲ
ಎಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಸಿಟ್ಟಾಗಿ ಮಾತಾಡಿದ್ದಾರೆ.
ADVERTISEMENT
ADVERTISEMENT