ಯಾವ ರೀತಿ ನಾವು ಇರಬೇಕೆಂದು ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಮಾರ್ಗದರ್ಶನ ನೀಡಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕುಮಾರಸ್ವಾಮಿ ಅವರು ಮಾತಾಡಿದರು.
ಇಂತಹ ಉತ್ತಮವಾದ ಸಮಯವನ್ನು ಕಳೆಯಲಿಕ್ಕೆ ನನ್ನ ಜೀವನದಲ್ಲಿ ಅವಕಾಶ ನೀಡಿದ್ದೀರಿ, ನನಗೆ ಇದು ಪ್ರೇರಣೆ. ಶ್ರೀರಾಮನ ಸಂಪೂರ್ಣವಾದ ಅನುಗ್ರಹ ಎಲ್ಲರ ಮೇಲೆ ಬರಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಜೈ ಶ್ರೀರಾಮ್ ಹರಿ ಹರಿ
ಎಂದು ಕುಮಾರಸ್ವಾಮಿ ಅವರು ಮಾತಾಡಿದ್ದಾರೆ.