ಜಿಮ್ ನಲ್ಲಿ ಡಿಪ್ಸ್ ಹೊಡೆದ ಕೆಲವೇ ಸೆಕೆಂಡ್ನಲ್ಲಿ ಪ್ರಾಣಬಿಟ್ಟ ಪೊಲೀಸ್ ಕಾನ್ಸ್ಸ್ಟೇಬಲ್

ಜಿಮ್​ನಲ್ಲಿ ಡಿಪ್ಸ್​ ಹೊಡೆದ ಕೆಲವೇ ಸೆಕೆಂಡ್​ನಲ್ಲಿ ಪೊಲೀಸ್​ ಕಾನ್ಸ್​ಸ್ಟೇಬಲ್​ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಜಿಮ್​ನಲ್ಲಿ ಪೊಲೀಸ್​ ಕಾನ್ಸ್​ಸ್ಟೇಬಲ್​ ಡಿಪ್ಸ್​ ಹೊಡೆಯುತ್ತಿರುವುದು, ಆ ಬಳಿಕ ಎದೆ ನೋವು ಕಾಣಸಿಕೊಂಡಿದ್ದು, ನಂತರ ಅಲ್ಲೇ ಕುಸಿದು ಹೃದಯಾಘಾತದಿಂದ ಮೃತಪಟ್ಟಿದ್ದು ಜಿಮ್​ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.

ತೆಲಂಗಾಣ ರಾಜಧಾನಿ ಹೈದ್ರಾಬಾದ್​ ನಗರದ ಆಸೀಫ್​ ನಗರ ಪೊಲೀಸ್​ ಠಾಣೆಯ ಕಾನ್ಸ್​ಸ್ಟೇಬಲ್​ ವಿಶಾಲ್​ ಮೃತ ಕಾನ್ಸ್​ಸ್ಟೇಬಲ್​.

ನಿನ್ನೆ ರಾತ್ರಿ 8 ಗಂಟೆಗೆ ಜಿಮ್​ನಲ್ಲಿ ಡಿಪ್ಸ್​ ಹೊಡೆಯುತ್ತಿದ್ದರು.

ವೀಡಿಯೋದಲ್ಲಿ 40 ಸೆಕೆಂಡ್​ ಡಿಪ್ಸ್​ ಹೊಡೆದಿರುವುದು ದಾಖಲಾಗಿದೆ. ಕೆಲವೇ ಕ್ಷಣಗಳಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಮತ್ತೆ ಬೆನ್ನು ಬಗ್ಗಿಸಿ ಎಕ್ಸ್​ಸೈಜ್​ ಮಾಡಿದ್ದಾರೆ. ಇದಾದ 20 ಸೆಕೆಂಡ್​ನಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ.

 

LEAVE A REPLY

Please enter your comment!
Please enter your name here