GST: ಮನೆ ಬಾಡಿಗೆಗೂ ಜಿಎಸ್​​ಟಿ..!

(ಸಾಂದರ್ಭಿಕ ಚಿತ್ರ)
ಮನೆ ಬಾಡಿಗೆಗೂ ಶೇಕಡಾ 18ರಷ್ಟು ಜಿಎಸ್​ಟಿ (GST) ತೆರಿಗೆ ಪಾವತಿಸಬೇಕಾಗುತ್ತದೆ.
ಜುಲೈ 18ರಿಂದ ಬದಲಾಗಿರುವ ಜಿಎಸ್​ಟಿ ತೆರಿಗೆ ನಿಯಮಗಳ ಪ್ರಕಾರ ಮನೆ ಬಾಡಿಗೆಗೂ ಈಗ ಜಿಎಸ್​ಟಿ ವ್ಯಾಪ್ತಿಗೆ ಬಂದಿದೆ.
ಜುಲೈ 18ರವರೆಗೂ ಬಾಡಿಗೆ (Rent) ಅಥವಾ ಲೀಸ್​ (Lease) ನೀಡುವ ವಾಣಿಜ್ಯ ಕಟ್ಟಡಗಳಷ್ಟೇ ಜಿಎಸ್​ಟಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸಬೇಕಿತ್ತು.
ಮನೆ ಮಾಲೀಕನ ಬದಲು ಮನೆ ಬಾಡಿಗೆದಾರ (Tenant) ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಆದರೆ ಮನೆ ಮನೆ ಮಾಲೀಕ ಜಿಎಸ್​ಟಿ ಪಾವತಿಸುವಂತಿಲ್ಲ.
ಆದರೆ ಜುಲೈ 18ರಿಂದ ಜಾರಿ ಆದ ಹೊಸ ಜಿಎಸ್​​ಟಿ ನಿಯಮಗಳ ಪ್ರಕಾರ ನೋಂದಣಿ ಆಗಿರುವ ಮನೆ ಬಾಡಿಗೆದಾರರು ಬಾಡಿಗೆ ಮೇಲೆ ಶೇಕಡಾ 18ರಷ್ಟು ಜಿಎಸ್​ಟಿ ಪಾವತಿಸುವುದು ಕಡ್ಡಾಯವಾಗಿದೆ.
ಮಾಸಿಕ ವೇತನ ಪಡೆಯುವವರು ಮನೆ ಬಾಡಿಗೆ ಅಥವಾ ಲೀಸ್​ಗೆ ಜಿಎಸ್​ಟಿ ಪಾವತಿ ಮಾಡಬೇಕಿಲ್ಲ.
ಪಾವತಿ ಮಾಡುವ ಜಿಎಸ್​ಟಿಯನ್ನು ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್ (Input Tax Credit)​ ಅಡಿ ಕ್ಲೈಮ್ (​ ಮಾಡಿಕೊಳ್ಳಲು ಅವಕಾಶವಿದೆ.

LEAVE A REPLY

Please enter your comment!
Please enter your name here