BJP ಶಾಸಕರ ಹೆಸರು ಬರೆದಿಟ್ಟು ಗ್ರಾಮ ಪಂಚಾಯತ್​ ಸಿಬ್ಬಂದಿ ಆತ್ಮಹತ್ಯೆ

BJP ಶಾಸಕ ಮತ್ತು ತಾಲೂಕು ಪಂಚಾಯತ್​ ಕಾರ್ಯನಿರ್ವಹಣಾಧಿಕಾರಿ ಹೆಸರು ಬರೆದಿಟ್ಟು ಗ್ರಾಮ ಪಂಚಾಯತ್​ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯತ್​ನಲ್ಲಿ ಎಸ್​ಡಿಎ ನೌಕರರಾಗಿದ್ದ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಮರಣಪತ್ರದಲ್ಲಿ ಶಾಸಕ ಎಂ ಚಂದ್ರಪ್ಪ ಮತ್ತು ತಾಲೂಕು ಪಂಚಾಯತ್​ ಇಒ ರವಿಕುಮಾರ್​ ತಮಗೆ ಕಿರುಕುಳ ಕೊಡುತ್ತಿದ್ದರು, ಅಮಾನತು ಮಾಡಿಸುವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಉಪ್ಪರಿಗೇನಹಳ್ಳಿಯ ಮೋಹನ್​ಕುಮಾರ್​, ಮೂರ್ತಿ, ಉಗ್ರಪ್ಪ, ರಾಜಪ್ಪ ಮತ್ತು 30 ಜನರ ಸ್ನೇಹಿತರು ತಮ್ಮನ್ನು ಬೆದರಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಎಸ್​ಸಿಗಳಿಗೆ ಮಾತ್ರ ಕೆಲಸ ಮಾಡಿಕೊಂಡು ಎಂದು ಪಿಡಿಒ ಮೂಲಕ ಇಒ ರವಿಕುಮಾರ್​ ಹಿಂಸೆ ಮಾಡ್ತಿದ್ದಾರೆ ಎಂದು ಮರಣಪತ್ರದಲ್ಲಿ ಆರೋಪಿಸಿದ್ದಾರೆ.

ತಾಲೂಕು ಪಂಚಾಯತ್​ ಇಒ ಮೇಲೆ ತನಿಖೆಯಾಗ್ಬೇಕು ಮತ್ತು ಲಿಂಗಾಯತರು ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎಂದು ಮರಣಪತ್ರದಲ್ಲಿ ಆಗ್ರಹಿಸಿದ್ದಾರೆ.

ಆತ್ಮಹತ್ಯೆ ಸಂಬಂಧ ಹೊಸದುರ್ಗ ಠಾಣೆಯಲ್ಲಿ FIR ದಾಖಲಾಗಿದೆ.

LEAVE A REPLY

Please enter your comment!
Please enter your name here