ಕಚ್ಚಾತೈಲ, ಡೀಸೆಲ್ ಮತ್ತು ವಿಮಾನ ಇಂಧನ ಮೇಲೆ ವಿಧಿಸಲಾಗಿದ್ದ ಅನಿರೀಕ್ಷಿತ ಲಾಭ ತೆರಿಗೆ (Windfall Tax)ನ್ನು ಪ್ರಧಾನಿ ಮೋದಿ ಸರ್ಕಾರ ಕಡಿತಗೊಳಿಸಿದೆ.
ಕಚ್ಚಾತೈಲದ ಮೇಲಿನ ಅನಿರೀಕ್ಷಿತ ಲಾಭ ತೆರಿಗೆಯನ್ನು ಟನ್ಗೆ 5,050 ರೂಪಾಯಿಗಳಿಂದ 4,350 ರೂಪಾಯಿಗೆ ಇಳಿಸಲಾಗಿದೆ.
ವಿಮಾನ ಇಂಧನ ರಫ್ತಿನ ಮೇಲಿನ ಅನಿರೀಕ್ಷಿತ ಲಾಭ ತೆರಿಗೆಯನ್ನು ಲೀಟರ್ಗೆ 6 ರೂಪಾಯಿಂದ 1.5 ರೂಪಾಯಿಗೆ ಕಡಿತಗೊಳಿಸಲಾಗಿದೆ.
ಡೀಸೆಲ್ ರಫ್ತು ಮೇಲಿನ ಅನಿರೀಕ್ಷಿತ ಲಾಭ ತೆರಿಗೆಯನ್ನು ಲೀಟರ್ಗೆ ರೂ. 7.5ರಿಂದ ರೂ.2.5ಕ್ಕೆ ಇಳಿಸಲಾಗಿದೆ.
ಅನಿರೀಕ್ಷಿತ ಲಾಭ ತೆರಿಗೆ ಕಡಿತದಿಂದ ವಿದೇಶಕ್ಕೆ ಕಚ್ಚಾತೈಲ, ಡೀಸೆಲ್, ವಿಮಾನ ಇಂಧನ ರಫ್ತು ಮಾಡುವ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಲಾಭ ಆಗಲಿದೆ.
ಕಳೆದ ವರ್ಷ ಉಕ್ರೇನ್-ರಷ್ಯಾ ನಡುವೆ ಯುದ್ಧ ಶುರುವಾದ ಬಳಿಕ ನಮ್ಮ ದೇಶದೊಳಗಿನ ಕಂಪನಿಗಳು ಆಮದು ಮಾಡಿಕೊಂಡ ಕಚ್ಚಾತೈಲವನ್ನು ಸಂಸ್ಕರಣೆ ಮಾಡಿ ವಿದೇಶಕ್ಕೆ ರಫ್ತು ಮಾಡುವುದರ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಕಳೆದ ವರ್ಷದ ಜುಲೈ 1ರಿಂದ ಕೇಂದ್ರ ಸರ್ಕಾರ ಅನಿರೀಕ್ಷಿತ ಲಾಭ ತೆರಿಗೆಯನ್ನು ವಿಧಿಸಲು ಶುರು ಮಾಡಿತ್ತು.
ಅನಿರೀಕ್ಷಿತ ಲಾಭ ತೆರಿಗೆಯಿಂದ ಸರ್ಕಾರಕ್ಕೆ ಈ ಆರ್ಥಿಕ ವರ್ಷದಲ್ಲೇ 25 ಸಾವಿರ ಕೋಟಿ ರೂಪಾಯಿ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ.
ADVERTISEMENT
ADVERTISEMENT