ADVERTISEMENT
ನಾಥುರಾಮ್ ಗೋಡ್ಸೆ ಭಾರತಮಾತೆಯ ಸುಪುತ್ರ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಣ್ಣಿಸಿದ್ದಾರೆ. ಮಹಾತ್ಮಾಗಾಂಧಿಯ ಹಂತಕ ಮೊಘಲ್ ದೊರೆಗಳಾದ ಬಾಬರ್, ಔರಂಗಜೇಬ್ನಂತೆ ವಲಸೆ ಬಂದವರಲ್ಲ.. ನಾಥುರಾಮ್ ಗೋಡ್ಸೆ ಈ ನೆಲದ ಮೇಲೆ ಹುಟ್ಟಿದವನು ಎಂದು ಮೋದಿ ಸಂಪುಟದ ಕ್ಯಾಬಿನೆಟ್ ದರ್ಜೆ ಸಚಿವ ಗಿರಿರಾಜ್ ಸಿಂಗ್ ವರ್ಣಿಸಿದ್ದಾರೆ.
ದಂತೆವಾಡದಲ್ಲಿ ಮಾತನಾಡಿದ ಅವರು, ತಮ್ಮನ್ನು ತಾವು ಬಾಬರ್, ಔರಂಗಜೇಬ್ ವಾರಸುದಾರರು ಎಂದು ಪರಿಗಣಿಸುವವರು ಭಾರತ ಮಾತೆಯ ನಿಜವಾದ ಪುತ್ರರಲ್ಲ. ಒಂದು ವೇಳೆ ನಾಥುರಾಮ್ ಗೋಡ್ಸೆ ಗಾಂಧಿ ಹಂತಕನಾದಲ್ಲಿ, ಆತ ಕೂಡ ಭಾರತದ ಸುಪುತ್ರ ಎಂದಿದ್ದಾರೆ.
ಗೋಡ್ಸೆ ಬಗ್ಗೆ ಎಂಐಎಂನ ಅಸಾದುದ್ದೀನ್ ಓವೈಸಿ, ಔರಂಗಜೇಬ್ ಬಗ್ಗೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನಾವೀಸ್ ನೀಡಿದ ಹೇಳಿಕೆಗಳನ್ನು ಪ್ರಸ್ತಾಪಿಸಿದ ಗಿರಿರಾಜ್ ಸಿಂಗ್, ಗೋಡ್ಸೆಯನ್ನು ಭಾರತದ ಸುಪುತ್ರ ಎಂದು ಹೊಗಳಿದ್ದಾರೆ.
ADVERTISEMENT