ಉದ್ಯಮಿ ಗೌತಮ್ ಅದಾನಿ ಕಂಪನಿ ದೇಶದ ಪ್ರಮುಖ ಸಿಮೆಂಟ್ ಕಂಪನಿ ಎಸಿಸಿಯಲ್ಲಿ ಸ್ವಿಸ್ ಕಂಪನಿ ಹೊಂದಿರುವ ಷೇರನ್ನು 81,400 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ಅತೀ ದೊಡ್ಡ ಖರೀದಿಯಲ್ಲಿ ಜಗತ್ತಿನ ಕುಬೇರ ಅದಾನಿ ಯಶಸ್ವಿ ಆಗಿದ್ದಾರೆ.
ಎಸಿಸಿ ಸಿಮೆಂಟ್ನಲ್ಲಿರುವ ಹೋಲ್ಸಿಮ್ ಕಂಪನಿ ಹೊಂದಿರುವ ಸಂಪೂರ್ಣ ಷೇರನ್ನು ಅದಾನಿ ಖರೀದಿಸಿದ್ದಾರೆ. ಈ ಮೂಲಕ ಅಂಬುಜಾ ಸಿಮೆಂಟ್ ಮತ್ತು ಎಸಿಸಿ ಸಿಮೆಂಟ್ ಅದಾನಿ ಪಾಲಾಗಿದೆ.
ಅಂಬುಜಾ ಸಿಮೆಂಟ್ನಲ್ಲಿ ಹೋಲ್ಸಿಮ್ ಶೇಕಡಾ 63.19ರಷ್ಟು ಪಾಲು ಹೊಂದಿದೆ. ಎಸಿಸಿಯಲ್ಲಿ ಶೇಕಡಾ 4.48ರಷ್ಟು ಪಾಲು ಹೊಂದಿದೆ. ಎಸಿಸಿಯಲ್ಲಿ ಶೇಕಡಾ 50.5ರಷ್ಟು ಷೇರನ್ನು ಅಂಬುಜಾ ಸಿಮೆಂಟ್ ಹೊಂದಿದೆ.