Ganavi Laxman: ಟಾಲಿವುಡ್​ಗೆ ಗಾನವಿ ಲಕ್ಷ್ಮಣ್ ಎಂಬ ರುದ್ರಂಗಿ

credit:Instagram

ಸ್ಯಾಂಡಲ್‌ವುಡ್‌ನಿಂದ ಈಗಾಗಲೇ ಹತ್ತಾರು ಹೀರೋಯಿನ್‌ಗಳು ಟಾಲಿವುಡ್‌ಗೆ ಹೋಗಿ ಸ್ಮಾರ್ಟ್ ಆಗಿದ್ದಾರೆ. ಈಗ ಮತ್ತೊಬ್ಬ ನಾಯಕಿ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅವರೇ ಗಾನವಿ ಲಕ್ಷ್ಮಣ್.

ಜಗಪತಿಬಾಬು,ಮಮತಾ ಮೋಹನ್‌ದಾಸ್ ಪ್ರಧಾನಪಾತ್ರಗಳಲ್ಲಿ ನಟಿಸಿರುವ ರುದ್ರಂಗಿಯಲ್ಲಿ ಗಾನವಿ ಲಕ್ಷ್ಮಣ್ ನಟಿಸಿದ್ದಾರೆ. ಈ ಸಿನಿಮಾ ಜುಲೈ 7ರಂದು ರಿಲೀಸ್ ಆಗಲಿದೆ.

ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದ ಗಾನವಿ ಲಕ್ಷ್ಮಣ್, ಡಿಗ್ರಿ ಮುಗಿಸುತ್ತಲೇ ನೃತ್ಯವನ್ನು ವೃತ್ತಿಯಾಗಿಸಿಕೊಂಡರು.

ಬೆಂಗಳೂರಿನಲ್ಲಿ ಡ್ಯಾನ್ಸ್ ಟೀಚರ್ ಆಗಿ ಕೆಲವು ವರ್ಷ ಕೆಲಸ ಮಾಡಿದರು. ಈ ಹಂತದಲ್ಲಿ ಸಿನಿನಟರ ಪರಿಚಯ ಏರ್ಪಟ್ಟು, ಸಿನಿಮಾ ಕಡೆ ಗಾನವಿ ಲಕ್ಷ್ಮಣ್‌ಗೆ ಸೆಳೆತ ಶುರುವಾಯಿತು.

ಮೊದಲಿಗೆ ಕೆಲವು ಜಾಹಿರಾತುಗಳಲ್ಲಿ ನಟಿಸಿದ ಗಾನವಿ ಲಕ್ಷ್ಮಣ್ ಸಿನಿಮಾದಲ್ಲಿ ಅವಕಾಶಗಳಿಗಾಗಿ ತುಂಬಾ ಆಡಿಷನ್ಸ್‌ನಲ್ಲಿ ಪಾಲ್ಗೊಂಡರು.

ರಿಷಬ್ ಶೆಟ್ಟಿ ನಿರ್ದೇಶನದ ಹಿಟ್ ಸಿನಿಮಾ ಕಿರಿಕ್ ಪಾರ್ಟಿಯ ನಾಯಕಿ ಪಾತ್ರಕ್ಕಾಗಿ ಆಡಿಷನ್ಸ್ ಕೊಟ್ಟಿದ್ದರು.

ಆದರೆ, ಗಾನವಿ ಲಕ್ಷ್ಮಣ್ ಆಯ್ಕೆಯಾಗಲಿಲ್ಲ. ಈ ಸಿನಿಮಾನದಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಮುಂದೆ ಸ್ಟಾರ್ ಆಗಿದ್ದು ಇತಿಹಾಸ.

ಈ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ ಎಂದು ಗಾನವಿ ಲಕ್ಷ್ಮಣ್ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ. ಈ ಹಂತದಲ್ಲಿಯೇ ಕಿರುತೆರೆಯಲ್ಲಿ ನಟಿಸಲು ಅವಕಾಶ ಸಿಕ್ಕಿತು.

ಮೊದಲ ಬಾರಿಗೆ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಮಗಳು ಜಾನಕಿ ಸೀರಿಯಲ್‌ನಲ್ಲಿ ಪ್ರಧಾನಪಾತ್ರ ಪೋಷಿಸಿ ನಟಿಯಾಗಿ ಬದಲಾದರು. ಈ ಸೀರಿಯಲ್ ಟಿವಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

ಕಳೆದುಕೊಂಡ ಕಡೆಯೇ ಹುಡುಕಬೇಕು ಎಂಬಂತೆ ಮತ್ತೆ ರಿಷಬ್ ಶೆಟ್ಟಿ ನಟಿಸಿದ ಹೀರೋ ಸಿನಿಮಾದಲ್ಲಿ ಗಾನವಿ ನಾಯಕಿಯಾಗಿ ನಟಿಸಿದರು.

ಈ ಸಿನಿಮಾ ಹಿಟ್ ಆದ ಪರಿಣಾಮ ಗಾನವಿಗೆ ಒಳ್ಳೆ ಹೆಸರು ಕೂಡ ಬಂತು.

ನಂತರ ಭಾವಚಿತ್ರ, ನಟ ಶಿವಣ್ಣನ ವೇದಾ ಸಿನಿಮಾದಲ್ಲಿ ನಟಿಸಿದರು.. ವೇದಾ ಸಿನಿಮಾದಲ್ಲಿ ಗಾನವಿ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕವು.

ಇದೀಗ ಸ್ಟಾರ್ ನಟಿಯಾಗಿ ಗಾನವಿ ಬೆಳೆಯುತ್ತಿದ್ದಾರೆ. ರುದ್ರಂಗಿ ಮೂಲಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.

ಆಲ್ ದಿ ಬೆಸ್ಟ್ ಗಾನವಿ ಲಕ್ಷ್ಮಣ್