ಖಾಸಗಿ ವಿಮೆ ಕಂಪನಿ ಪಿಎನ್ಬಿ ಮೆಟ್ಲೈಫ್ ಇನ್ಸೂರೆನ್ಸ್ ಕಂಪನಿ ತನ್ನ ಗ್ರಾಹಕರಿಗೆ ದಂತ ಚಿಕಿತ್ಸೆಗೆಂದೇ ದೇಶದ ಮೊದಲ ದಂತ ಚಿಕಿತ್ಸೆ ವಿಮೆಯನ್ನು ಪರಿಚಯಿಸಿದೆ. ದಂತ ಚಿಕಿತ್ಸೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಂಬAಧಿಸಿದ ಎಲ್ಲ ಖರ್ಚು ವೆಚ್ಚಗಳನ್ನು ಈ ವಿಮೆಯ ಮೂಲಕ ಕಂಪನಿ ಭರಿಸಲಿದೆ.
ಡೆಂಟಲ್ ಕ್ಲಿನಿಕ್ಗಳಲ್ಲಿ ವಿಮೆ ಬಳಕೆ:
ಆಸ್ಪತ್ರೆಗಳ ಕಿರಿಕಿರಿ ಬದಲು ಡೆಂಟಲ್ ಕ್ಲಿನಿಕ್ಗಳಲ್ಲಿ ದಂತ ಚಿಕಿತ್ಸೆ ಅಥವಾ ದಂತ ತಪಾಸಣೆ ಮಾಡಿದರೂ ವಿಮೆ ಸೌಲಭ್ಯ ಸಿಗಲಿದೆ. ದೇಶದ 340 ಡೆಂಟಲ್ ಕ್ಲಿನಿಕ್ಗಳ ಜೊತೆಗೆ ಕಂಪನಿ ಜೊತೆಯಾಗಿ ಸೇವೆ ನೀಡಲಿದೆ.
ಈ ವಿಮೆಯ ಪಾವತಿ ಮೊತ್ತ 3,006 ರೂಪಾಯಿ. ವಿಮೆ ಲಾಭದ ಮೊತ್ತ 50 ಸಾವಿರ ರೂಪಾಯಿ. 350 ರೂ.ಗಳಿಂದ 7,500 ರೂಪಾಯಿವರೆಗೆ ನಿಗದಿತ ಲಾಭವನ್ನು ಪಡೆದುಕೊಳ್ಳಬಹುದು. 50 ಸಾವಿರ ರೂಪಾಯಿವರೆಗಿನ ದಂತ ಚಿಕಿತ್ಸೆಯನ್ನು ಕಂಪನಿ ಭರಿಸಲಿದೆ.