ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿವೆ.
ಮಳೆಯ ಹೊಡೆತದ ಧಾಟಿಗೆ ಬೋಗಾದಿ ನಾಗಲಿಂಗೇಶ್ವರ ದೇವಸ್ಥಾನದ ಬಳಿ ಸೇತುವೆಯೊಂದು ಕೊಚ್ಚಿ ಹೋಗಿದೆ. ರಸ್ತೆ ಸಂಪರ್ಕ ಕಟ್ ಆಗಿದ್ದು, ವಾಹನ ಸಂಚಾರ ಅಷ್ಟವ್ಯಾಷ್ಟವಾಗಿದೆ. ಈಗಲೂ ಅಲ್ಲಿ ನೀರು ರಭಸವಾಗಿ ಹರಿಯುತ್ತಿದೆ.
ಇಡೆ ವೇಳೆ ವಿದ್ಯಾರಣ್ಯಪುರಂನ ನಾಲ್ಕನೇ ಕ್ರಾಸ್ ನಲ್ಲಿ ಮರವೊಂದು ಉರುಳಿ ಕಾರೊಂದು ನಜ್ಜುಗುಜ್ಜಾಗಿದೆ.
ಇನ್ನು ತಗ್ಗುಪ್ರದೇಶವಾದ ಶಾರದಾದೇವಿ ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ.
ಕೇರಳದಲ್ಲಿ ಮಾನ್ಸೂನ್ ಪೂರ್ವ ಮಳೆ ಆಗುತ್ತಿರುವ ಪರಿಣಾಮ ಮೈಸೂರು, ಚಾಮರಾಜನಗರದಲ್ಲಿಯೂ ವಿಸ್ತಾರವಾಗಿ ಮಳೆ ಆಗುತ್ತಿದೆ.