ಮುಸಲ್ಮಾನರು ಮತ್ತು ಮುಸಲ್ಮಾನ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಾಮಾಜಿಕ ಕಾರ್ಯಕರ್ತೆ ನಜ್ಮಾ ಚಿಕ್ಕನೇರಳೆ ಅವರು ನೀಡಿರುವ ದೂರಿನ ಮೇರೆ ಪ್ರಕರಣ ದಾಖಲಾಗಿದೆ.
ಐಪಿಸಿ ಕಲಂ 354 – ಮಹಿಳೆಯರ ಗೌರವ, ಘನತೆ, ಸಭ್ಯತೆಗೆ ಧಕ್ಕೆ ಉಂಟು ಮಾಡುವುದು
ಐಪಿಸಿ ಕಲಂ 294 – ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ಮಾತುಗಳನ್ನು ಆಡುವುದು
ಐಪಿಸಿ ಕಲಂ 509 – ಮಹಿಳೆಯ ಘನತೆಗೆ ಧಕ್ಕೆ ತರುವ ಮತ್ತು ಆಕೆಯ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಮಾತಾಡುವುದು, ಧ್ವನಿ ಹೊರಡಿಸುವುದು, ಹಾವ-ಭಾವ, ಭಂಗಿಗಳನ್ನು ಪ್ರದರ್ಶಿಸುವುದು, ವಸ್ತುಗಳನ್ನು ಪ್ರದರ್ಶಿಸುವುದು
ಐಪಿಸಿ 506: ಕ್ರಿಮಿನಲ್ ಬೆದರಿಕೆ
ಐಪಿಸಿ 153ಎ – ಗುಂಪುಗಳ ನಡುವೆ ದ್ವೇಷ ಭಾವನೆ ಸೃಷ್ಟಿಸುವುದು
ಐಪಿಸಿ 295 – ಧಾರ್ಮಿಕ ಸ್ಥಳಗಳಿಗೆ ಹಾನಿ, ಧಕ್ಕೆ ಉಂಟು ಮಾಡುವುದು
ಐಪಿಸಿ 295ಎ- ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು
ಐಪಿಸಿ 298 – ಧಾರ್ಮಿಕ ಭಾವನೆಗಳನ್ನು ನೋಯಿಸುವ ಸಲುವಾಗಿ ಮಾತುಗಳನ್ನಾಡುವುದು
ADVERTISEMENT
ADVERTISEMENT