ಫೆಬ್ರವರಿ 14ರಂದು ದನಗಳ ಅಪ್ಪುಗೆ ದಿನವನ್ನಾಗಿ ಆಚರಿಸಿ – ಕೇಂದ್ರ ಸರ್ಕಾರದಿಂದ ಸಾರ್ವಜನಿಕರಲ್ಲಿ ಮನವಿ

ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ. ಆದರೆ ಪ್ರೇಮಿಗಳ ದಿನವನ್ನು ದನಗಳ ಅಪ್ಪುಗೆ ದಿನವಾಗಿ ಆಚರಿಸುವಂತೆ ಭಾರತದ ಪ್ರಾಣಿಗಳ ಅಭಿವೃದ್ಧಿ ಮಂಡಳಿ ಮನವಿ ಮಾಡಿದೆ.
ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರಾಣಿಗಳ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಎಸ್​ ಕೆ ದತ್ತಾ ಈ ಸಂಬಂಧ ಪತ್ರವನ್ನು ಬರೆದಿದ್ದಾರೆ.
ದನಗಳು ಭಾರತದ ಗ್ರಾಮೀಣ ಆರ್ಥಿಕತೆ ಬೆನ್ನೆಲುಬು ಮತ್ತು ಭಾರತದ ಸಂಸ್ಕೃತಿಯ ಭಾಗ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಕಾರಣ ನಮ್ಮ ವೈದಿಕ ಸಂಸ್ಕೃತಿ ಅಳಿವಿನಂಚಿನಲ್ಲಿದೆ. ಪಾಶ್ಚಿಮಾತ್ಯ ಸಂಸ್ಕತಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯುವಂತೆ ಮಾಡಿದೆ.
ದನಗಳನ್ನು ಅಪ್ಪಿಕೊಳ್ಳುವುದರಿಂದ ಭಾವನಾತ್ಮಕ ಸಮೃದ್ಧಿಯನ್ನುಂಟು ಮಾಡಿ ವೈಯಕ್ತಿಕ ಮತ್ತು ಸಮಗ್ರ ಸಂತೋಷಕ್ಕೆ ಹೆಚ್ಚಿಸುತ್ತದೆ.
ಹೀಗಾಗಿ ದನ ತಾಯಿಯ ಪ್ರಾಮುಖ್ಯತೆ ಮತ್ತು ಜೀವನದ ಸಂತೋಷ ಮತ್ತು ಶಕ್ತಿಯನ್ನು ಪರಿಗಣಿಸಿ ಫೆಬ್ರವರಿ 14ರ ದಿನವನ್ನು ದನ ಪ್ರಿಯರು ದನಗಳ ಅಪ್ಪುಗೆ ದಿನವನ್ನಾಗಿ ಆಚರಿಸಿ
ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here