ತಮಿಳುನಾಡಿನಲ್ಲಿ (Tamilnadu) ಬಿಹಾರ (Bihar) ಮೂಲದ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಳು ಸುದ್ದಿ (Fake News) ಪ್ರಕಟಿಸಿದ್ದ ಪ್ರಮುಖ ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ್ (Dainik Bhaskar) ಬಹಿರಂಗ ಕ್ಷಮೆ ಕೇಳಿದೆ.
ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ತನ್ನ ಪತ್ರಿಕೆಯ ಮುಖಪುಟದಲ್ಲಿ ದೈನಿಕ್ ಭಾಸ್ಕರ್ ತಮಿಳುನಾಡು ಮತ್ತು ಬಿಹಾರ ಜನತೆಯ ಕ್ಷಮೆಯಾಚಿಸಿದೆ.
ಈ ಸುಳ್ಳು ಆಧರಿಸಿಯನ್ನೇ ಬಿಹಾರದಲ್ಲಿ ಬಿಜೆಪಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿತ್ತು.
ಮುಖಪುಟದಲ್ಲಿ ಬಹಿರಂಗ ಕ್ಷಮೆಯಾಚಿಸುವಂತೆ ಪತ್ರಿಕೆಗೆ ಮದ್ರಾಸ್ ಹೈಕೋರ್ಟ್ (Madras High Court) ಆದೇಶಿಸತ್ತಲ್ಲದೇ 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತ್ತು.
ಮಾರ್ಚ್ 2ರಂದು ದೈನಿಕ್ ಭಾಸ್ಕರ್ ತನ್ನ ಮುಖಪುಟದಲ್ಲೇ ಬಿಹಾರ ಮೂಲದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ ಎಂದು ಸುಳ್ಳು ಸುದ್ದಿ ಪ್ರಕಟಿಸಿತ್ತು.
ಈ ವರದಿ ಬಳಿಕ ತಮಿಳುನಾಡು ಪೊಲೀಸ್ ಮುಖ್ಯಸ್ಥರ ಸ್ಪಷ್ಟನೆ ಬಳಿಕ ಪತ್ರಿಕೆ ತನ್ನ ಡಿಜಿಟಲ್ ವೆಬ್ಸೈಟ್ ಮತ್ತು ಟ್ವಿಟ್ಟರ್ ಒಳಗೊಂಡಂತೆ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದ ಆ ಸುದ್ದಿಯನ್ನು ತೆಗೆದುಹಾಕಿತ್ತು.
ADVERTISEMENT
ತಮಿಳುನಾಡು ಮತ್ತು ಬಿಹಾರ ಜನತೆಗೆ ಆಗಿರುವ ಮುಜುಗರಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ದೈನಿಕ್ ಭಾಸ್ಕರ್ ಪತ್ರಿಕೆ ಹೇಳಿದೆ.
ADVERTISEMENT